ವಿಜಯವೀರ್ ಸಿಧುಗೆ ಬೆಳ್ಳಿ
Update: 2021-03-27 10:45 IST
ಐ ಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ವಿಜಯವೀರ್ ಸಿಧು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಇಸ್ಟೋನಿಯದ ಪೀಟರ್ ಒಲೆಸ್ಕ್ ಮೊದಲ ಸ್ಥಾನ ಪಡೆದಿದ್ದಾರೆ. 40 ಶಾಟ್‌ಗಳ ಫೈನಲ್‌ನಲ್ಲಿ ವಿಜಯವೀರ್ ಹಾಗೂ ಪೀಟರ್ ತಲಾ 26 ಹಿಟ್ಸ್ ಗಳನ್ನು ಹೊಡೆದಿದ್ದು, ಸ್ಪರ್ಧೆ ಟೈ ಆಗಿತ್ತು. ಆಗ ಶಾಟ್ -ಆಫ್‌ನಲ್ಲಿ ವಿಜಯವೀರ್ ಕೇವಲ ಒಂದು ಹಿಟ್ ಗಳಿಸಿದರು. ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ 4 ಶಾಟ್ ಮೂಲಕ ಮೊದಲ ಸ್ಥಾನ ಪಡೆದರು.
ಫೈನಲ್‌ನಲ್ಲಿ ಇತರ ಭಾರತೀಯರಾದ ಅನೀಶ್ ಭನ್ವಾಲಾ ಹಾಗೂ ಗುರುಪ್ರೀತ್ ಸಿಂಗ್ ಐದನೇ ಹಾಗೂ ಆರನೇ ಸ್ಥಾನ ಪಡೆದಿದ್ದಾರೆ. 20 ಹಿಟ್ ಗಳಿಸಿದ್ದ ಪೊಲೆಂಡ್‌ನ ಆಸ್ಕರ್ ಮಿಲಿವೆಕ್ ಕಂಚಿನ ಪದಕ ಜಯಿಸಿದ್ದಾರೆ.