×
Ad

ಬಂಕುರಾದಲ್ಲಿ ಸ್ಫೋಟ: ಮೂವರು ಟಿಎಂಸಿ ಕಾರ್ಯಕರ್ತರಿಗೆ ಗಾಯ

Update: 2021-03-27 11:54 IST
photo: ANI

ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭೆ ಮೊದಲ ಹಂತದ ಮತದಾನ ನಡೆಯುವ ಮುನ್ನಾದಿನ ಶುಕ್ರವಾರ ಬಂಕುರಾ ಜಿಲ್ಲೆಯ ಜೋಯ್ಪುರ ಪ್ರದೇಶದ ಮುರಳಿಗಂಜ್ ನಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿಯ ಹೊರಗೆ ಸಂಭವಿಸಿರುವ ಸ್ಫೋಟದಲ್ಲಿ ಟಿಎಂಸಿಯ ಕನಿಷ್ಠ ಮೂವರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ಕಾಂಗ್ರೆಸ್-ಎಡಪಕ್ಷ ಮೈತ್ರಿಕೂಟ ಈ ಸ್ಫೋಟದ ಹಿಂದಿದೆ ಎಂದು ಟಿಎಂಸಿ ಆರೋಪಿಸಿದೆ.

ಟಿಎಂಸಿ ಕಾರ್ಯಕರ್ತರು ತಮ್ಮ ಪಕ್ಷದ ಕಚೇರಿಯಲ್ಲಿ ಬಾಂಬ್ ಗಳನ್ನು ತಯಾರಿಸುತ್ತಿದ್ದು ಹೀಗಾಗಿ ಕಚೇರಿಯ ಒಳಗೆ ಸ್ಫೋಟ ಸಂಭವಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಟಿಎಂಸಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್-ಎಡರಂಗದ ಮೈತ್ರಿಕೂಟದಲ್ಲಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ನಾಲ್ವರು ಐಎಸ್ ಎಫ್ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News