×
Ad

ಆಸ್ಪತ್ರೆಯಿಂದ ಪರಾರಿಯಾಗಿದ್ದ ಕುಖ್ಯಾತ ಕ್ರಿಮಿನಲ್‍ನನ್ನು ಎನ್‍ಕೌಂಟರ್ ನಲ್ಲಿ ಕೊಂದ ಪೊಲೀಸರು

Update: 2021-03-28 11:01 IST

ಹೊಸದಿಲ್ಲಿ: ಗೋಗ ಗ್ಯಾಂಗ್ ನ ಕುಖ್ಯಾತ ಕ್ರಿಮಿನಲ್ ರವಿವಾರ ಬೆಳಗ್ಗೆ ದಿಲ್ಲಿ ಪೊಲೀಸರೊಂದಿಗಿನ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಕ್ರಿಮಿನಲ್ ಕುಲ್ ದೀಪ್ ಫಝ್ಝಾ ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಈತನನ್ನು ಕಳೆದ ವರ್ಷ ಮಾರ್ಚ್‍ನಲ್ಲಿ ದಿಲ್ಲಿ ಪೊಲೀಸ್ ನ ವಿಶೇಷ ಘಟಕವು ಗುರುಗ್ರಾಮದಲ್ಲಿ ಬಂಧಿಸಿತ್ತು. 

ಮಾರ್ಚ್ 25ರಂದು ಜಿಟಿಬಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕುಲ್ ದೀಪ್ ರೋಹಿಣಿಯ ಸೆಕ್ಟರ್ 14ರ ಫ್ಲಾಟ್‍ನಲ್ಲಿ ಅಡಗಿಸಿಕೊಂಡಿದ್ದ. ಕಟ್ಟಡವನ್ನು ಸುತ್ತುವರಿದಿದ್ದ ಪೊಲೀಸರು ಕುಲ್ ದೀಪ್‍ಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಪೊಲೀಸರು ಪ್ರತಿ ಗುಂಡಿಗೆ ಆತ ಗಾಯಗೊಂಡಿದ್ದ. ಕುಲ್‍ದೀಪ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆತ ಸಾವನ್ನಪ್ಪಿದ್ದಾನೆ.

ಕುಲ್‍ದೀಪ್ ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಹೋಗುತ್ತಿದ್ದಾಗ ತನ್ನ ತಂಡದ ಅನೇಕ ಸದಸ್ಯರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ. ಗುರುವಾರ ಮಧ್ಯರಾತ್ರಿ ಸರಕಾರಿ ಆಸ್ದತ್ರೆಯಲ್ಲಿ ಭೀಕರ ಗುಂಡಿನ ಚಕಮಕಿ ನಡೆದಿದ್ದು,  ಬೆಂಗಾವಲು ಪೊಲೀಸ್ ತಂಡ ಹಾಗೂ ಕುಲ್ ದೀಪ್ ರಕ್ಷಣೆಗೆ ಬಂದಿದ್ದ ಗುಂಪಿನ ನಡುವೆ ಮುಖಾಮುಖಿಯಾಗಿತ್ತು.

ಹಲ್ಲೆಕೋರರು ಮೊದಲಿಗೆ ಪೊಲೀಸ್ ತಂಡದ ಮೇಲೆ ಮೆಣಸಿನ ಪುಡಿಯನ್ನು ಎಸೆದಿದ್ದು, ನಂತರ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಯಲ್ಲಿ ಓರ್ವ ಹಲ್ಲೆಕೋರ ಸಾವನ್ನಪ್ಪಿದರೆ, ಇನ್ನೊಬ್ಬ ಗಾಯಗೊಂಡಿದ್ದ. 

ಗೋಗ ಗ್ಯಾಂಗ್ ಸುಲಿಗೆ, ಹಫ್ತಾ ವಸೂಲಿ ದಂಧೆ ಹಾಗೂ ಕಾರ್-ಜಾಕಿಂಗ್ ಸಹಿತ ಇತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News