ಆರೆಸ್ಸೆಸ್ ಮುಖಂಡನ ಮೇಲೆ ಹಲ್ಲೆಗೈದಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕವಾಗಿ ಥಳಿಸಿದ ಕಾರ್ಯಕರ್ತರು

Update: 2021-03-28 07:22 GMT

ಮಥುರಾ: ಆರೆಸ್ಸೆಸ್‌ ಪ್ರಚಾರಕ್‌ ಓರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪೊಲೀಸರಿಗೆ ಸಾರವಜನಿಕವಾಗಿ ಥಳಿತಿದ ಘಟನೆಯು ಮಥುರಾದ ವೃಂದಾವನ ಸಮೀಪದ ಕುಂಭದಲ್ಲಿ ನಡೆದಿದೆ. ಘಟನೆಯ ಬಳಿಕ ಇನ್ನೂ ಕೆಲವು ಪೊಲೀಸರನ್ನು ಆರೆಸ್ಸೆಸ್‌ ಮತ್ತು ಬಿಜೆಪಿ ಸದಸ್ಯರೆನ್ನಲಾದ ಕೆಲವರು ಥಳಿಸಿದ್ದಾರೆಂದು indiatoday.in ವರದಿ ಮಾಡಿದೆ.

ವೃಂದಾವನದ ಕುಂಭ ಮೇಳದ ಸಂದರ್ಭದಲ್ಲಿ ಸಮೀಪದ ಯಮುನಾ ನದಿಯಲ್ಲಿ ಆರೆಸ್ಸೆಸ್‌ ಜಿಲ್ಲಾ ಪ್ರಚಾರಕ ಮನೋಜ್‌ ಕುಮಾರ್‌ ಎಂಬಾತ ಸ್ನಾನ ಮಾಡುತ್ತಿದ್ದ ವೇಳೆ ಆತ ನಿಯಮ ಉಲ್ಲಂಘಿಸಿದ್ದ ಎನ್ನಲಾಗಿದೆ. ಈ ಕುರಿತಾದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆತನ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಆತನ ವಿರುದ್ಧ ಕೆಟ್ಟದಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಕೂಡಲೇ ಆರೆಸ್ಸೆಸ್‌ ಮತ್ತು ಬಿಜೆಪಿ ಸದಸ್ಯರು ಸ್ಥಳಕ್ಕೆ ಜಮಾಯಿಸಿದ್ದು. ಕೋತ್ವಾಲಿ ಎಂಬಲ್ಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಎರಡು-ಮೂರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದು ಮತ್ತು ಪೊಲೀಸ್‌ ಓರ್ವನಿಗೆ ಹಿಂದಿಯಿಂದ ಹೆಲ್ಮೆಟ್‌ ಮೂಲಕ ಹೊಡೆಯುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಹಲವಾರು ಪೊಲೀಸರು ಹಲ್ಲೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಎಸ್‌ಎಸ್ಪಿ ಹಾಗೂ ಇನ್ನಿತರ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಅಲ್ಲಿ ಸೇರಿದ್ದ ಜನರು ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಿಜೆಪಿ ಅಧ್ಯಕ್ಷ ವಿನೋದ್‌ ಅಗರ್ವಾಲ್‌ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಯುನೈಟೆಡ್‌ ಡಿಸ್ಟ್ರಿಕ್ಟ್‌ ಆಸ್ಪತ್ರೆಯ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಸಬ್‌ ಇನ್‌ ಸ್ಪೆಕ್ಟರ್‌ ಸೇರಿದಂತೆ ಇತರ ನಾಲ್ವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಮನೋಜ್‌ ಕುಮಾರ್‌ ನ ಸಹಾಯಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News