‌ನಿರೂಪಕಿ ತಮಿಳು ಬಿಟ್ಟು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಂತೆಯೇ ವೇದಿಕೆಯಿಂದ ಇಳಿದು ಹೋದ ಎ.ಆರ್.‌ ರಹ್ಮಾನ್!

Update: 2021-03-28 09:41 GMT

ಹೊಸದಿಲ್ಲಿ: ಭಾರತದ ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್.‌ ರಹ್ಮಾನ್‌ ರವರು ತಾವು ರಚಿಸಿದ ಮತ್ತು ಕಂಪೋಸ್‌ ಮಾಡಿದ 99 ಹಾಡುಗಳ ಸರಣಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಡೆದ ಬೆಳವಣಿಗೆಯೊಂದು ವೀಕ್ಷಕರನ್ನು ಮತ್ತು ಅತಿಥಿಗಳನ್ನು ಕೊಂಚ ವಿಚಲಿತರನ್ನಾಗಿಸಿದರೂ ಬಳಿಕ ಸನ್ನಿವೇಶವನ್ನು ರಹ್ಮಾನ್‌ ಹಾಸ್ಯಮಯವಾಗಿಸಿದ್ದಾರೆ.

ತಮಿಳುನಾಡಿನಲ್ಲಿ ಈಗಾಗಲೇ ಹಿಂದಿ ಹೇರಿಕೆಯ ಕುರಿತಾದಂತೆ ಹಲವಾರು ವಿರೋಧಗಳು ಕೇಳಿ ಬರುತ್ತಿದೆ. ಈ ನಡುವೆ ಕಾರ್ಯಕ್ರಮದಲ್ಲಿ ರಹ್ಮಾನ್‌ ರವರು ನಟ ಇಶಾನ್‌ ಭಟ್‌ ರೊಂದಿಗೆ ವೇದಿಕೆಯೇರಿದಾಗ ನಿರೂಪಕಿಯು ರಹ್ಮಾನ್‌ ರೊಂದಿಗೆ ತಮಿಳಿನಲ್ಲಿ ಮಾತನಾಡಿದರು. ಬಳಿ ಇಶಾನ್‌ ಭಟ್‌ ರೊಂದಿಗೆ ಹಿಂದಿಯಲ್ಲಿ ಮಾತು ಪ್ರಾರಂಭಿಸಿದಾಗ ರಹ್ಮಾನ್‌ ಹಿಂದಿಯಾ? ಎಂದು ಪ್ರಶ್ನಿಸಿ ವೇದಿಕೆಯಿಂದ ಕೆಳಗಿಳಿದರು.

ವೇದಿಕೆಯಿಂದ ಕೆಳಗಿಳಿದ ಬಳಿಕ "ನೀವು ತಮಿಳಿನಲ್ಲೇ ಮಾತನಾಡಬೇಕು ಎಂದು ನಾನು ಹೇಳಿದ್ದೀನಲ್ವಾ? ಎಂದು ನಿರೂಪಕಿಯೊಂದಿಗೆ ಪ್ರಶ್ನಿಸಿದರು. ಅದರ ಬೆನ್ನಲ್ಲೇ "ನಾನು ತಮಾಷೆಗಾಗಿ ಮಾಡಿದೆ" ಎಂದು ಹೇಳಿದಾಗ ನಿರೂಪಕಿಯು ನಿರಾಳರಾಗಿ "ನಿಮ್ಮಂತಹ ದಂತಕಥೆಗಳ ಕೈಯಿಂದ ತಮಾಷೆಗೊಳಗಾಗುವುದು ಕೂಡಾ ಪ್ರಶಂಸೆಯಾಗಿದೆ" ಎಂದು ಪ್ರತಿಕ್ರಿಯಿಸಿದರು. ಈ ಎರಡೂ ಸನ್ನಿವೇಶಗಳಲ್ಲೂ ಅಭಿಮಾನಿಗಳ ಕರತಾಡನ ಮುಂದುವರಿದಿತ್ತು. ʼಹಿಂದಿ ಹೇರಿಕೆಯ ಕುರಿತಾದಂತೆ ಈ ರೀತಿಯಾಗಿ ರಹ್ಮಾನ್‌ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆಂದು ಸಾಮಾಜಿಕ ತಾಣದಲ್ಲಿ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News