ಪಶ್ಚಿಮ ಬಂಗಾಳ ಮೊದಲ ಹಂತದ ಚುನಾವಣೆ: 30ರಲ್ಲಿ 26 ಸ್ಥಾನ ಗೆಲ್ಲುತ್ತೇವೆಂದ ಅಮಿತ್‌ ಶಾ

Update: 2021-03-28 10:09 GMT

ಹೊಸದಿಲ್ಲಿ: ಪಶ್ಚಿಮಬಂಗಾಳದಲ್ಲಿ ಶನಿವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ 26ರಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಅಸ್ಸಾಂನಲ್ಲಿ ಶನಿವಾರ ನಡೆದಿದ್ದ 47 ಸ್ಥಾನಗಳ ಚುನಾವಣೆಯಲ್ಲಿ 37ರಲ್ಲಿ ನಾವೇ ಗೆಲ್ಲಲಿದ್ದೇವೆ ಎಂದು ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮಬಂಗಾಳ ಹಾಗೂ ಅಸ್ಸಾಂನಲ್ಲಿ ಶನಿವಾರ ಮೊದಲ  ಹಂತದ ಮತದಾನ ಕೊನೆಗೊಂಡಿದೆ. ನಮಗೆ ಮತದಾನ ಮಾಡಿರುವುದಕ್ಕೆ ಎರಡೂ ರಾಜ್ಯಗಳ ಜನತೆಗೆ ಧನ್ಯವಾದ ಹೇಳುವೆ. ಭಾರೀ ಪ್ರಮಾಣದ ಮತದಾನವು ಜನರ ಉತ್ಸಾಹವನ್ನು ತೋರಿಸುತ್ತದೆ. ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರೊಂದಿಗೆ ಚರ್ಚಿಸಿದ ಬಳಿಕ ಪಶ್ಚಿಮಬಂಗಾಳದಲ್ಲಿ 30ರಲ್ಲಿ 26 ಸೀಟುಗಳನ್ನು ಗೆಲ್ಲಲಿದ್ದೇವೆ. ಅಸ್ಸಾಂನಲ್ಲಿ 47 ಸೀಟುಗಳ ಪೈಕಿ 37ರಲ್ಲಿ ಗೆಲ್ಲುವ ಸ್ಪಷ್ಟ ಸಂಕೇತ ಲಭಿಸಿದೆ ಎಂದರು.

ಮೊದಲ ಹಂತದ ಚುನಾವಣೆಯಲ್ಲಿ ಸಂಜೆ 5ರ ತನಕ ಬಂಗಾಳದಲ್ಲಿ ಶೇ.79.79 ಹಾಗೂ ಅಸ್ಸಾಂನಲ್ಲಿ 72.14 ಶೇ.ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿತ್ತು.
ಬಂಗಾಳದಲ್ಲಿ 30 ಕ್ಷೇತ್ರಗಳು ಹಾಗೂ ಅಸ್ಸಾಂನಲ್ಲಿ 47 ಸ್ಥಾನಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 21,825 ಮತಗಟ್ಟೆಗಳಿದ್ದವು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News