'ಲವ್‌ ಜಿಹಾದ್‌ʼ ಕುರಿತು ಭಯ ಹುಟ್ಟಿಸುವ ಬಿಜೆಪಿಯ ಆಟ ಕೇರಳದಲ್ಲಿ ನಡೆಯುವುದಿಲ್ಲ: ಶಶಿ ತರೂರ್‌

Update: 2021-03-28 12:09 GMT

ಹೊಸದಿಲ್ಲಿ: ಬಿಜೆಪಿಗೆ ಕೇವಲ ಕೋಮುವಾದವನ್ನು ಮಾತ್ರ ನೀಡಲು ಸಾಧ್ಯ. ಲವ್‌ ಜಿಹಾದ್‌ ಕುರಿತಾದಂತೆ ಜನರಲ್ಲಿ ವೃಥಾ ಭೀತಿ ಸೃಷ್ಟಿಸಿ ದ್ವೇಷ ರಾಜಕಾರಣ ಮಾಡುತ್ತಾ ಜನರನ್ನು ವಿಭಜಿಸುವ ಕೆಲಸವು ಕೇರಳದಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ ನ ಹಿರಿಯ ನಾಯಕ ಶಶಿ ತರೂರ್‌ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿರುವ ಇ. ಶ್ರೀಧರನ್‌ ರಾಜ್ಯ ರಾಜಕಾರಣದ ಭವಿಷ್ಯವಾಗಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಪಿಟಿಐ ಸುದ್ದಿ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಸರಿಯಾದ ಮುಖ್ಯಮಂತ್ರಿ ಮುಖವಿಲ್ಲದೇ ಇರುವುದು ಯುಡಿಎಫ್‌ ಗೆ ಹಿನ್ನಡೆಯಾಗಬಹುದೇ ಎಂಬ ಪ್ರಶ್ನೆಗೆ "ಕೇರಳದಲ್ಲಿ ಯುಡಿಎಫ್‌ ಅನುಭವಿ ಹಿರಿಯ ನಾಯಕರನ್ನು ಹೊಂದಿ ಸಮೃದ್ಧವಾಗಿದೆ. ಅವರಲ್ಲಿ ಯಾರು ಬೇಕಾದರೂ ನಾಯಕರಾಗಬಹುದು. ಕೇರಳದಲ್ಲಿ ಜನರು ಯುಡಿಎಫ್‌ ಪರವಾಗಿದ್ದಾರೆ. ಗೆಲುವು ಯುಡಿಎಫ್‌ ನದ್ದಾಗಲಿದೆ" ಎಂದು ಹೇಳಿದರು.

"ಕೇರಳವು ಬಹುತ್ವವಿರುವ ರಾಜ್ಯವಾಗಿದೆ. ಇಲ್ಲಿ ಲವ್‌ ಜಿಹಾದ್‌ ಕುರಿತಾದಂತೆ ಜನರಲ್ಲಿ ಭಯ ಹುಟ್ಟಿಸುವ ಆಟ, ವಿಭಜನೆಯ ದ್ವೇಷ ತುಂಬಿದ ರಾಜಕಾರಣ, ಧರ್ಮಾಂಧತೆ ಇವುಗಳಿಗೆ ಅವಕಾಶವಿಲ್ಲ. ಬಿಜೆಪಿ ಕೇವಲ ಕೋಮುವಾದವನ್ನು ಮಾತ್ರ ನೀಡುತ್ತದೆ. ಮೆಟ್ರೋಮ್ಯಾನ್‌ ಇ ಶ್ರೀಧರನ್‌ ರವರು ಕೇರಳದ ರಾಜಕೀಯ ಭವಿಷ್ಯಕ್ಕೆ ಉದಾಹರಣೆಯಾಗುವ ಯಾವುದೇ ಸಾಧ್ಯತೆಯಿಲ್ಲ" ಎಂದು ಶಶಿ ತರೂರ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News