ವಶಪಡಿಸಿಕೊಂಡಿದ್ದ ಮದ್ಯ ನಾಪತ್ತೆಯಾಗಲು ಇಲಿಗಳು ಕಾರಣ ಎಂದ ಪೊಲೀಸರು: ಪ್ರಕರಣ ದಾಖಲು

Update: 2021-03-28 17:05 GMT
ಸಾಂದರ್ಭಿಕ ಚಿತ್ರ

ಇಟಾ(ಉ.ಪ್ರ),ಮಾ.28: ಭದ್ರತಾ ಕೊಠಡಿಯಲ್ಲಿದ್ದ,ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯದ ಹಲವಾರು ಪೆಟ್ಟಿಗೆಗಳು ನಾಪತ್ತೆಯಾಗಿರುವುದಕ್ಕೆ ಇಲಿಗಳು ಕಾರಣ ಎಂದು ಸಮಜಾಯಿಷಿ ನೀಡಿದ್ದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಗೊಂಡಿದೆ.

 ಇಟಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದ 1,400ಕ್ಕೂ ಅಧಿಕ ಮದ್ಯದ ಪೆಟ್ಟಿಗೆಗಳು ನಾಪತ್ತೆಯಾಗಿದ್ದು, ಠಾಣಾಧಿಕಾರಿ ಇಂದ್ರೇಶಪಾಲ್ ಸಿಂಗ್ ಮತ್ತು ಗುಮಾಸ್ತ ರಿಷಾಲ್ ಸಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಆದರೆ ಠಾಣೆಯ ಜನರಲ್ ಡೈರಿಯಲ್ಲಿ 239 ಪೆಟ್ಟಿಗೆಗಳನ್ನು ಇಲಿಗಳು ಹಾಳು ಮಾಡಿವೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಏನೋ ಸಂಶಯ ಇರುವಂತಿದೆ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಇಟಾ ಎಸ್ಪಿ ಉದಯಶಂಕರ ಸಿಂಗ್ ಅವರು ರವಿವಾರ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News