ಕೋಡಿ: ಶಾಂತಿಯುತ ಮತದಾನ

Update: 2021-03-29 16:00 GMT

ಕೋಟ, ಮಾ.29: ಕೋಡಿ ಗ್ರಾಪಂನ 11 ಸ್ಥಾನಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು. ಗ್ರಾಪಂನ ಒಟ್ಟು 12 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಚುನಾವಣೆ, ಹಕ್ಕುಪತ್ರ ಹಾಗೂ ಜಟ್ಟಿಕಾಮಗಾರಿ ವಿಳಂಬದಿಂದ ಆಕ್ರೋಶಿತ ಸ್ಥಳೀಯರು ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದರು.

ಇದರಿಂದ ಇಂದು ಗ್ರಾಪಂನ ಎಲ್ಲಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಅಪರಾಹ್ನದ ಹೊತ್ತಿಗೆ ಶೇ40ರಷ್ಟು ಮತ ಚಲಾವಣೆಯಾಗಿತ್ತು. ಕೋಡಿ ಕನ್ಯಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆೆ ಹಾಗೂ ಬೇಂಗ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ ಮತದಾನದ ವೇಳೆ ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಯಾರೂ ಹೆಚ್ಚಿನ ಗಮನವನ್ನೇ ಕೊಡಲಿಲ್ಲ. ಮತದಾನಕ್ಕೆ ಸೇರಿದ ಜನರು ಸರತಿ ಸಾಲಿನಲ್ಲಿದ್ದರೂ ಸುರಕ್ಷಿತಾ ಅಂತರ ಕಂಡುಬರಲಿಲ್ಲ. ಹೆಚ್ಚಿನವರು ಮಾಸ್ಕ್ ಸಹ ಧರಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News