ಎ. 3ರಂದು ಒಕ್ಕೆತ್ತೂರಿನಲ್ಲಿ ಬೃಹತ್ ರಕ್ತದಾನ ಶಿಬಿರ

Update: 2021-03-31 05:16 GMT

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಧ್ವನಿಬೆಳಕು ಸಂಯೋಜಕರ ಒಕ್ಕೂಟ ವಿಟ್ಲ ವಲಯ,  ಐಡಿಯಲ್ ಫ್ಯೂಲ್ಸ್ ಮಂಗಳಪದವು ಸಹಯೋಗದಲ್ಲಿ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಯಿಂದ ವಿಟ್ಲದ ಒಕ್ಕೆತ್ತೂರು ಸರಕಾರಿ ಶಾಲಾ ವಠಾರದಲ್ಲಿ ಎ.3ರಂದು ಬೆಳಗ್ಗೆ 9.30ಕ್ಕೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಈ ಸಂದರ್ಭ ಮಂಗಳಪದವು ಐಡಿಯಲ್ ಫ್ಯೂಲ್ಸ್ ವತಿಯಿಂದ ಪ್ರಥಮ 50 ರಕ್ತದಾನಿಗಳಿಗೆ ಇಂಡಿಯನ್ ಆಯಿಲ್ ನ ಉಚಿತ 1 ಲೀಟರ್ ಪೆಟ್ರೋಲ್/ಡೀಸೆಲ್ ವಿತರಿಸಲಿದೆ.

ಪ್ರಸ್ತುತ ರಕ್ತದಾನ ಎಲ್ಲೆಡೆ ನಡೆಯುತ್ತಿದೆ. ಅದರ ಅವಶ್ಯಕತೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ವಿಟ್ಲ ಲಯನ್ಸ್ ಕ್ಲಬ್ ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಹೊಸ ಪ್ರಯೋಗ ಮಾಡಿದೆ. ಯುವ ಸಮೂಹ ಈ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಸಲು ಯೋಜನೆ ರೂಪಿಸಿದೆ. ಪ್ರಥಮ 50 ರಕ್ತದಾನಿಗಳಿಗೆ ಪೆಟ್ರೋಲ್/ಡೀಸೆಲ್ ಸಿಗಲಿದೆ. ಈ ಸಂದರ್ಭ ಕೆಎಂಸಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್ ಮತ್ತು ಸರ್ಟಿಫಿಕೇಟ್ ಕೂಡಾ ದೊರಕಲಿದೆ. ಹೆಚ್ಚಿನ ಮಾಹಿತಿಗೆ 9008857506 ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News