×
Ad

ಕೊರೋನ ವೈರಸ್ ನಿವಾರಣೆಗೆ ಶೀಘ್ರದಲ್ಲಿ ಬರಲಿದೆ ಮಾತ್ರೆಗಳು !

Update: 2021-03-31 23:05 IST

ಕೋಲ್ಕತಾ, ಮಾ. 31: ಭಾರತದ ಖಾಸಗಿ ವಲಯದ ಕಂಪೆನಿ ಪ್ರೇಮಾಸ್ ಬಯೋಟೆಕ್ ಕ್ಯಾಪ್ಸೂಲ್ ಮಾದರಿಯ ಕೊರೋನ ಲಸಿಕೆಯನ್ನು ಸಿದ್ಧಪಡಿಸುತ್ತಿದೆ ಎಂದು ಕಂಪೆನಿಯ ಆಡಳಿತ ನಿರ್ದೇಶಕ ಡಾ. ಪ್ರಬುದ್ಧ ಕುಂಡು ಅವರು ಹೇಳಿದ್ದಾರೆ.

ಲಸಿಕೆ ಅಭಿವೃದ್ಧಿಗೆ ಪ್ರೋಟಿನ್‌ಗಳ ಮರು ಸಂಯೋಜನೆಯಲ್ಲಿ ತಜ್ಞತೆ ಹೊಂದಿರುವ ಜೈವಿಕ ತಂತ್ರಜ್ಞಾನ ಆಧಾರಿತ ಗುರುಗ್ರಾಮ ಮೂಲದ ಕಂಪೆನಿ ಪ್ರೇಮಾಸ್ ಜೆರುಸಲೇಂನಲ್ಲಿ ಕೇಂದ್ರ ಕಚೇರಿ ಹೊಂದಿರುವ ಒರಾಮೆಡ್ ಪಾರ್ಮಾಸ್ಯೂಟಿಕಲ್‌ನೊಂದಿಗೆ ಈ ಸಂಬಂಧ ಪಾಲುದಾರಿಕೆ ಮಾಡಿಕೊಂಡಿದೆ. ಒರಾಮೆಡ್ ಕಂಪೆನಿಯು ಚುಚ್ಚುಮದ್ದು ಚಿಕಿತ್ಸೆಯನ್ನು ಬಾಯಿಯ ಮೂಲಕ ಸೇವಿಸುವ ಔಷಧಕ್ಕೆ ಪರಿವರ್ತಿಸುವಲ್ಲಿ ತಜ್ಞತೆ ಹೊಂದಿದೆ. ಅಲ್ಲದೆ, ಅಂತಿಮ ಹಂತದ ಪ್ರಯೋಗದಲ್ಲಿರುವ ಮಾದರಿ 1 ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಕ್ಯಾಪ್ಸುಲ್‌ಗೆ ಜನಪ್ರಿಯವಾಗಿದೆ.

ಪ್ರೇಮಾಸ್ ಹಾಗೂ ಒರಾಮೆಡ್ ಜಂಟಿ ಸಹಭಾಗಿತ್ವದದಲ್ಲಿ ಓರಾವ್ಯಾಕ್ಸ್ ಕ್ಯಾಪ್ಯೂಲ್ ಅಭಿವೃದ್ಧಿಗೊಳಿಸಲಾಗುತ್ತಿದೆ. ‘‘ವ್ಯಾಕ್ಸಿನ್ ಮಾತ್ರೆ ಅಥವಾ ಕ್ಯಾಪ್ಸೂಲ್‌ನ ಒಂದು ಡೋಸ್ ಪರಿಣಾಮ ಬೀರಿರುವುದು ಪ್ರಾಣಿಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. ಯಾವುದೇ ವಿಶೇಷ ವಿತರಣಾ ವ್ಯವಸ್ಥೆ ಹಾಗೂ ಶೈತ್ಯಾಗಾರದ ಅಗತ್ಯ ಇರದ ಓರಾವ್ಯಾಕ್ಸ್ ವಿಭಿನ್ನ ಉತ್ಪಾದನೆ’’ ಎಂದ ಕಂಡು ಹೇಳಿದ್ದಾರೆ. ಇದು ಪರಿಣಾಮಕಾರಿ ಎಂದು ಸಾಬೀತಾದರೆ, ಸಿರೆಂಜ್ ಹಾಗೂ ಆಸ್ಪತ್ರೆ ವ್ಯವಸ್ಥೆ ಅಗತ್ಯ ಇಲ್ಲ. ಆದುದರಿಂದ ಜಗತ್ತಿಗೆ ಇದು ಅತಿ ಹೆಚ್ಚು ಪ್ರಯೋಜನವಾಗಲಿದೆ ಎಂದು ಕುಂಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News