ನಂದಿಗ್ರಾಮ ಮತಗಟ್ಟೆಯಲ್ಲಿ ಸಿಲುಕಿದ ಮಮತಾ: ಅರೆ ಸೇನಾ ಪಡೆಯಿಂದ ರಕ್ಷಣೆ

Update: 2021-04-01 17:59 GMT

ನಂದಿಗ್ರಾಮ, ಎ. 1: ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಬೆಂಬಲಿಗರು ಮುಖಾಮುಖಿಯಾದ ಸಂದರ್ಭ ತೀವ್ರ ಉದ್ವಿಗ್ನತೆ ಸೃಷ್ಟಿಯಾದ ನಡುವೆ ನಂದಿಗ್ರಾಮದ ಮತಗಟ್ಟೆಯಲ್ಲಿ ಗುರುವಾರ ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸಿಲುಕಿಕೊಂಡ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೇಂದ್ರ ಅರೆಸೇನಾ ಪಡೆ ಗುರುವಾರ ರಕ್ಷಿಸಿದೆ.

ಮತಗಟ್ಟೆ ಒಳಗಿಂದ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಕರೆ ಮಾಡಿದ್ದಾರೆ. ಕಾನೂನು ಹಾಗೂ ಸುವ್ಯವಸ್ಥೆಯ ಉಸ್ತುವಾರಿಯ ಹೊಣೆ ಹೊತ್ತ ಚುನಾವಣಾ ಆಯೋಗದ ವಿಫಲತೆಯ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದ್ದಾರೆ. ‘‘ಯಾವುದೇ ಸಂದರ್ಭ ಏನು ಕೂಡ ಆಗಬಹುದು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ’’ ಎಂದು ಭದ್ರತಾ ಪಡೆಯ ಬೆಂಗಾವಲಿನ ಮೂಲಕ ಹೊರ ಬಂದ ಗಾಲಿ ಕುರ್ಚಿಯಲ್ಲಿದ್ದ ಮಮತಾ ಬ್ಯಾನರ್ಜಿ ಹೇಳಿದರು. ಈ ಸಂದರ್ಭ ಭದ್ರತಾ ಪಡೆ ಗ್ರಾಮಸ್ಥರೊಂದಿಗೆ ದೀರ್ಘ ಕಾಲ ಮಾತುಕತೆ ನಡೆಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News