ದೇಶದಲ್ಲಿ ಸೆಪ್ಟಂಬರ್ ಬಳಿಕ ದೈನಂದಿನ ಕೋವಿಡ್ ಕೇಸ್ ಗಳಲ್ಲಿ ಭಾರೀ ಏರಿಕೆ
Update: 2021-04-03 10:58 IST
ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 89,129 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯ ಲಾಕ್‍ಡೌನ್ ಘೋಷಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.
ಇಂದಿನ ದೈನಂದಿನ ಕೊರೋನ ಕೇಸ್ ಸೆಪ್ಟಂಬರ್ 20ರ ಬಳಿಕ ಗರಿಷ್ಠ ಮಟ್ಟ ತಲುಪಿದೆ. ಕಳೆದ ವರ್ಷ ಸೆಪ್ಟಂಬರ್ 20ರಂದು ಒಂದೇ ದಿನ 92,605 ಕೇಸ್‍ಗಳು ವರದಿಯಾಗಿತ್ತು.
ಶುಕ್ರವಾರ ಕೊರೋನ ಕುರಿತು ಪರಿಶೀಲನಾ ಸಭೆ ನಡೆಸಿರುವ ಕೇಂದ್ರ ಸರಕಾರವು, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ, ಛತ್ತೀಸ್‍ಗಢ, ಚಂಡೀಗಢ, ಗುಜರಾತ್, ಮಧ್ಯಪ್ರದೇಶ, ತಮಿಳು ನಾಡು, ದಿಲ್ಲಿ ಹಾಗೂ ಹರ್ಯಾಣದ ಪರಿಸ್ಥಿತಿ ಗಂಭೀರ ಕಳವಳಕಾರಿಯಾಗಿದೆ ಎಂದು ಹೇಳಿದೆ. ಈ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗ ಶೇ.90ರಷ್ಟು ಪ್ರಕರಣಗಳು ವರದಿಯಾಗುತ್ತಿವೆ.
ಮಹಾರಾಷ್ಟ್ರದ ಪರಿಸ್ಥಿತಿ ಕೆಟ್ಟದ್ದಾಗಿದ್ದು, ಅಲ್ಲಿ ಗುರುವಾರ ಒಂದೇ ದಿನ 47,824 ಕೇಸ್ ಗಳು ವರದಿಯಾಗಿತ್ತು.