×
Ad

ಉತ್ತರಪ್ರದೇಶ: ಟ್ಯೂಶನ್ ತರಗತಿಯಿಂದ ಹಿಂದಿರುತ್ತಿದ್ದ ಶಾಲಾ ಬಾಲಕಿಯ ಅಪಹರಿಸಿ, ಸಾಮೂಹಿಕ ಅತ್ಯಾಚಾರ

Update: 2021-04-03 12:13 IST

ಲಕ್ನೊ: ಮೀರತ್ ನಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಟ್ಯೂಶನ್ ತರಗತಿಯಿಂದ ಹಿಂದಿರುತ್ತಿದ್ದಾಗ ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ವರದಿಯಾಗಿದೆ. ಅತ್ಯಾಚಾರಕ್ಕೀಡಾದ ಬಾಲಕಿ ಬಳಿಕ ಡೆತ್ ನೋಟ್‍ನಲ್ಲಿ ಆರೋಪಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸರ್ಧಾನ ಕೊಟ್ಟಾಳಿ ಪ್ರದೇಶದ ಹಳ್ಳಿಯಲ್ಲಿ ವಾಸಿಸುತ್ತಿರುವ ಬಾಲಕಿ ತನ್ನ ಮೇಲೆ ಅತ್ಯಾಚಾರವಾದ ಬಳಿಕ ಗುರುವಾರ ಸಂಜೆ ಮನೆಗೆ ಮರಳಿದ ನಂತರ ವಿಷ ಸೇವಿಸಿದ್ದಾಳೆ. ಶಾಲಾ ಬಾಲಕಿ ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಪತ್ರದಲ್ಲಿ ಬಾಲಕಿಯು ಪಕ್ಕದ ಹಳ್ಳಿಯ ಲಖನ್ ಹಾಗೂ ವಿಕಾಸ್ ಸೇರಿದಂತೆ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿದ್ದಳು. ಡೆತ್‍ನೋಟ್ ಆಧರಿಸಿ ಲಖನ್, ವಿಕಾಸ್ ಪ್ರಕಾಶ್ ಎಂಬ ಮೂವರು  ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ನಾಲ್ವರನ್ನು ಗುರುತಿಸಲಾಗಿದೆ ಎಂದು ಮೀರತ್ ನ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಕೇಶವಕುಮಾರ್ ತಿಳಿಸಿದ್ದಾರೆ.

ಮನೆಗೆ ವಾಪಸಾದ ಬಳಿಕ ಬಾಲಕಿಯು ಘಟನೆಯ ಬಗ್ಗೆ ಹೆತ್ತವರಿಗೆ ವಿವರಿಸಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಕೆಲವು ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಳು. ಬಾಲಕಿಯನ್ನು ಮೋದಿಪುರಂನ ಎಸ್ ಎಸ್ ಡಿ ಗ್ಲೋಬಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ. ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News