×
Ad

"ಅಸ್ಸಾಂನಲ್ಲಿ ಕೊರೋನ ಇಲ್ಲ, ಮಾಸ್ಕ್‌ ಅನವಶ್ಯಕ" ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿದ ಬಿಜೆಪಿ ಮುಖಂಡ

Update: 2021-04-04 17:10 IST

ಗುವಾಹಟಿ: "ಅಸ್ಸಾಂ ರಾಜ್ಯದಲ್ಲಿ ಕೊರೋನ ಇಲ್ಲ. ಸದ್ಯ ಅಸ್ಸಾಂನಲ್ಲಿ ಮಾಸ್ಕ್‌ ಧರಿಸುವ ಅವಶ್ಯಕತೆಯಿಲ್ಲ ಎಂದು ಶನಿವಾರ ಹೇಳಿಕೆ ನೀಡಿದ್ದ ಅಸ್ಸಾಂ ಆರೋಗ್ಯ ಸಚಿವ ಹಾಗೂ ಬಿಜೆಪಿ ಮುಖಂಡ ಹಿಮಂತ ಶರ್ಮಾ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ. "ಈ ವರ್ಷದ ಬಿಹು ಹಬ್ಬವನ್ನು ಉತ್ಸಾಹದಿಂದ ಆಚರಿಸಲಿದ್ದೇವೆ" ಎಂದೂ ಹೇಳಿಕೆ ನೀಡಿದ್ದಾರೆ.

ತಮ್ಮ ಹೇಳಿಕೆಯು ವ್ಯಾಪಕ ಟ್ರೋಲ್‌ ಆದ ಬಳಿಕ ಟ್ವೀಟ್‌ ಮಾಡಿರುವ ಹಿಮಂತ ಬಿಸ್ವ ಶರ್ಮ "ನಾನು ಮಾಸ್ಕ್‌ ಕುರಿತಾದಂತೆ ನೀಡಿದ್ದ ಹೇಳಿಕೆಯನ್ನು ವ್ಯಂಗ್ಯ ಮಾಡುವವರು ಅಸ್ಸಾಂಗೆ ಬಂದು ನೋಡಿ. ದಿಲ್ಲಿ, ಕೇರಳ ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ಆರ್ಥಿಕ ಚೇತರಿಕೆಯೊಂದಿಗೆ ಕೋವಿಡ್‌ ಅನ್ನು ನಿಯಂತ್ರಿಸಿದ್ದೇವೆ. ನಾವು ಉತ್ಸಾಹದೊಂದಿಗೆ ಈ ವರ್ಷದ ಬಿಹು ಹಬ್ಬವನ್ನು ಆಚರಿಸಲಿದ್ದೇವೆ" ಎಂದು ಟ್ವೀಟ್‌ ಮಾಡಿದ್ದಾರೆ.

ಹಿಮಂತ ಶರ್ಮ ಹೇಳಿಕೆಯ ಕುರಿತು ವ್ಯಂಗ್ಯವಾಡಿದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ʼನಮ್ಮ ರಾಜ್ಯದಲ್ಲಿ ಕೋವಿಡ್‌ ಇಲ್ಲʼ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿರುವುದು ಇದೇ ಮೊದಲು" ಎಂದು ಟ್ವೀಟ್‌ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News