ಕೋವಿಡ್ ಕೇಸ್ ಹೆಚ್ಚಳ: ದಿಲ್ಲಿಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ
Update: 2021-04-06 13:10 IST
ಹೊಸದಿಲ್ಲಿ: ಕೋವಿಡ್ ಪ್ರಕರಣಗಳು ತೀವ್ರವಾಗಿ ಏರುತ್ತಿರುವ ಕಾರಣ ಇಂದಿನಿಂದ ಎಪ್ರಿಲ್ 30ರ ತನಕ ರಾತ್ರಿ 10ರಿಂದ 5 ಗಂಟೆಯ ತನಕ ಕರ್ಫ್ಯೂ ಆರಂಭಿಸಲಾಗುವುದು ಎಂದು ದಿಲ್ಲಿ ಸರಕಾರವು ತಿಳಿಸಿದೆ.
ದಿಲ್ಲಿಯಲ್ಲಿ ಕೋವಿಡ್-19ನ ನಾಲ್ಕನೇ ಅಲೆ ಕಾಣಿಸಿಕೊಂಡಿದೆ. ಈಗ ಲಾಕ್ ಡೌನ್ ಹೇರಿಕೆಯನ್ನು ಪರಿಗಣಿಸಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದರು.
ಪ್ರಸ್ತುತ ಪರಿಸ್ಥಿತಿಯನ್ವಯ ನಾವು ಲಾಕ್ ಡೌನ್ ಹೇರುವ ಬಗ್ಗೆ ಯೋಚಿಸುತ್ತಿಲ್ಲ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಾರ್ವಜನಿಕ ಸಮಾಲೋಚನೆಯ ನಂತರವೇ ಅಂತಹ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರ ದಿಲ್ಲಿಯಲ್ಲಿ 3,548 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 15 ಸಾವು ಸಂಭವಿಸಿದೆ.