×
Ad

ಗುಜರಾತ್‍: ತ್ಯಾಜ್ಯ ಟ್ರಕ್‍ನಲ್ಲಿ ವೆಂಟಿಲೇಟರ್ ಸಾಗಾಟ!

Update: 2021-04-06 14:16 IST
Photo: indiatoday.in

ಅಹ್ಮದಾಬಾದ್ : ಗುಜರಾತ್‍ನಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯ ನಡುವೆ ಸೂರತ್ ಜಿಲ್ಲೆಯ ಆಸ್ಪತ್ರೆಗಳಿಗೆ 34 ವೆಂಟಿಲೇಟರ್‍ಗಳನ್ನು ಸ್ಥಳೀಯಾಡಳಿತ  ತ್ಯಾಜ್ಯ ಸಾಗಾಟ ಟ್ರಕ್‍ನಲ್ಲಿ ಸಾಗಿಸಿ ಟೀಕೆಗೊಳಗಾಗಿದೆ.

ಗುಜರಾತ್‍ನಲ್ಲಿ ಸೋಮವಾರ ಒಂದೇ ದಿನ 3,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಹಲವೆಡೆ ವೆಂಟಿಲೇಟರ್ ಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಲ್ಸಾಡ್‍ನಿಂದ ಸೂರತ್‍ಗೆ 34 ವೆಂಟಿಲೇಟರ್ ಗಳನ್ನು ಪೂರೈಸುವಂತೆ ಗುಜರಾತ್ ಸರಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಸೂರತ್ ಮುನಿಸಿಪಲ್ ಆಡಳಿತ ವೆಂಟಿಲೇಟರ್ ಗಳ ಸಾಗಾಟಕ್ಕೆಂದು ವಲ್ಸಾಡ್‍ಗೆ ತ್ಯಾಜ್ಯ ಸಾಗಾಟ ಟ್ರಕ್ ಕಳುಹಿಸಿತ್ತು. ಇದೇ ಟ್ರಕ್ ವೆಂಟಿಲೇಟರ್‍ಗಳನ್ನು ಹೊತ್ತುಕೊಂಡು ಸೂರತ್‍ಗೆ ಆಗಮಿಸಿತ್ತು ಎಂದು indiatoday.in ವರದಿ ಮಾಡಿದೆ.

ಈ ಕುರಿತು ವಲ್ಸಾಡ್ ಜಿಲ್ಲಾ ಕಲೆಕ್ಟರ್ ಆರ್ ಆರ್ ರಾವಲ್ ಅವರ ಗಮನ ಸೆಳೆದಾಗ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News