×
Ad

ಸೆಲ್ಫೀ ಕ್ಲಿಕ್ಕಿಸಲು ಯತ್ನಿಸಿದ ಮಾಸ್ಕ್ ಧರಿಸದ ಅಭಿಮಾನಿಯ ಮೊಬೈಲ್ ಫೋನ್ ಸೆಳೆದ ನಟ ಅಜಿತ್

Update: 2021-04-06 16:10 IST
Photo source: Twitter(@rameshlaus)
 

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ಅವರು ಮಾರು ದೂರ. ಹೀಗಿರುವಾಗ ಇಂತಹ ಒಂದು ನಟನನ್ನು ನೋಡಲು ದೊರೆತ ಅವಕಾಶವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದಿಲ್ಲ.

ಇಂದು ತಿರುವನ್ಮಿಯೂರ್ ಬೂತ್ ಒಂದರಲ್ಲಿ ಮತದಾನಕ್ಕೆಂದು ಬೆಳಿಗ್ಗೆ 7 ಗಂಟೆಗೇ ಅಜಿತ್ ಅವರು ತಮ್ಮ ಪತ್ನಿ ಹಾಗೂ ನಟಿ ಶಾಲಿನಿ ಜತೆಗೆ ಆಗಮಿಸಿದ್ದರು.  ಮತದಾನದ ನಂತರ ಕ್ಯಾಮರಾಗಳಿಗೆ ಪೋಸ್ ಕೂಡ ಅಜಿತ್ ನೀಡಿದರು. ಆ ಕ್ಷಣ ಮಾಸ್ಕ್ ಧರಿಸದೇ ಇದ್ದ ಅಭಿಮಾನಿಯೊಬ್ಬರು ನಟನ ಜತೆ ಸೆಲ್ಫೀ ಕ್ಲಿಕ್ಕಿಸಿದ್ದರು. ಇದನ್ನು ಗಮನಿಸಿದ ಅಜಿತ್ ತಕ್ಷಣ ಆತನ ಕೈಯ್ಯಿಂದ ಮೊಬೈಲ್ ಸೆಳೆದಿದ್ದರು. ನಂತರ ಅಲ್ಲಿದ್ದ ಜನರನ್ನೆಲ್ಲಾ  ದೂರ ಹೋಗಲು ಅಜಿತ್ ಹೇಳುವುದು ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುತ್ತದೆ. ಕೆಲವರು ಮಾಸ್ಕ್ ಧರಿಸಿದ್ದರೆ ಇನ್ನು ಕೆಲವರು ಮಾಸ್ಕ್ ಧರಿಸದೇ ಇರುವುದನ್ನು ವೀಡಿಯೋದಲ್ಲಿ ಗಮನಿಸಬಹುದು.

ಈ ಘಟನೆಯನ್ನು ನೆಟ್ಟಿಗರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ ಹಾಗೂ ಕೆಲವರು ನಟ ಅಜಿತ್ ಹಾಗೂ ನಟ ವಿಜಯ್ ನಡುವೆ ಹೋಲಿಕೆಯನ್ನೂ ಮಾಡಿದ್ದಾರೆ.

"ಅಜಿತ್ ಅವರು ತಮ್ಮ ಅಭಿಮಾನಿಯೊಬ್ಬನ ಫೋನ್ ಸೆಳೆದು ಸೆಲ್ಫೀ ಕ್ಲಿಕ್ಕಿಸುವುದನ್ನು ತಡೆದು ಅಲ್ಲಿಂದ ಅಭಿಮಾನಿಗಳನ್ನು ದೂರ ಓಡಿಸಿದ್ದಾರೆ. ವಿಜಯ್ ಅವರು ತಮ್ಮದೇ  ಫೋನ್‍ನಿಂದ ತಮಗಾಗಿ ನೆಯ್ವೇಲಿಯಲ್ಲಿ ಕಾದಿದ್ದ  ಮಿಲಿಯಗಟ್ಟಲೆ ಅಭಿಮಾನಿಗಳ ಜತೆ ತಮ್ಮದೇ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಇದು ಅವರ ನಡುವಿನ ವ್ಯತ್ಯಾಸ,'' ಎಂದು ಟ್ವಿಟರಿಗರೊಬ್ಬರು ಬರೆದಿದ್ದರೆ, ಇನ್ನೊಬ್ಬರು "ಅಜಿತ್ ಸರ್ ನಮಗೆಲ್ಲ ಖುಷಿ ನೀಡಿದ್ದಾರೆ, ಅವರು ತಮ್ಮ ಕುಟುಂಬದ ಜತೆ ಮತದಾನಗೈದು ತಮ್ಮ ಹಕ್ಕು ಚಲಾಯಿಸಲು ಆಗಮಿಸಿದಾಗ ನಾವು ಶಾಂತರಾಗಿರಬೇಕು,'' ಎಂದು ಇನ್ನೊಬ್ಬರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News