ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು 3,000 ಕೋಟಿ ರೂ. ಅಗತ್ಯವಿದೆ: ಅದಾರ್ ಪೂನಾವಾಲ

Update: 2021-04-06 16:00 GMT

ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆ ತಯಾರಿಸುವ ಸೀರಮ್ ಇನ್ ಸ್ಟಿಟ್ಯೂಟ್ (ಎಸ್ ಐಐ) ಉತ್ಪಾದನೆಯನ್ನು ಹೆಚ್ಚಿಸಲು ಸುಮಾರು  3,000 ಕೋಟಿ ರೂ. ಅಗತ್ಯವಿದೆ ಎಂದು ಸಿಇಒ ಅದಾರ್ ಪೂನಾವಾಲ ಮಂಗಳವಾರ NDTVಗೆ ತಿಳಿಸಿದರು.

ಎರಡನೇ ಕೋವಿಡ್ ಅಲೆ ದೇಶಾದ್ಯಂತ ವ್ಯಾಪಿಸುತ್ತಿದೆ ಹಾಗೂ  ಕೇಂದ್ರವು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಡೋಸ್ ಗಳನ್ನು ತಯಾರಿಸುವ ತುರ್ತು ಕರೆಗಳನ್ನು ಎದುರಿಸುತ್ತಿದೆ.

ಮೊದಲ 100 ಮಿಲಿಯನ್ ಡೋಸ್‌ಗಳನ್ನು ಹೆಚ್ಚು ಸಬ್ಸಿಡಿ ದರದಲ್ಲಿ ಪೂರೈಸಲು ಎಸ್‌ಐಐ ಒಪ್ಪಿಕೊಂಡಿದೆ ಎಂದು ಈ ಹಿಂದೆ ಹೇಳಿದ್ದ ಪೂನವಾಲಾ, ಕಂಪನಿಯು ಈಗಿದ್ದಕ್ಕಿಂತ ಹೆಚ್ಚು ಲಾಭವನ್ನು ಗಳಿಸಬೇಕಾಗಿತ್ತು, ಇದರಿಂದ ಅದು ಉತ್ಪಾದನಾ ಮಾರ್ಗ ಮತ್ತು ಸೌಲಭ್ಯಗಳಲ್ಲಿ ಮರು ಹೂಡಿಕೆ ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ತ್ವರಿತವಾಗಿ ಡೋಸ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದರು.

"ನಾವು ಲಸಿಕೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು ರೂ. 150-160ಕ್ಕೆ ಪೂರೈಸುತ್ತಿದ್ದೇವೆ. ಲಸಿಕೆಯ ಸರಾಸರಿ ಬೆಲೆ ಅಂದಾಜು  20 ಡಾಲರ್ (1,500 ರೂ.) ... ಮೋದಿ ಸರಕಾರದ ಕೋರಿಕೆಯ ಮೇರೆಗೆ ನಾವು ಸಬ್ಸಿಡಿ ದರದಲ್ಲಿ ಲಸಿಕೆಗಳನ್ನು ನೀಡುತ್ತಿದ್ದೇವೆ ... ನಾವು ಲಾಭ ಗಳಿಸುತ್ತಿಲ್ಲವೆಂದಲ್ಲ ... ಆದರೆ ನಾವು ಗರಿಷ್ಠ ಲಾಭ ಗಳಿಸುತ್ತಿಲ್ಲ, ಗರಿಷ್ಠ ಲಾಭ ಗಳಿಸುವುದು ಮರು ಹೂಡಿಕೆಗೆ ಪ್ರಮುಖವಾಗಿದೆ ಎಂದು ಪೂನಾವಾಲ ತಿಳಿಸಿದರು.

"ನಮಗೆ ಅಗತ್ಯವಿರುವ ಮೊತ್ತ ಸರಿಸುಮಾರು  3,000 ಕೋಟಿ ರೂ.ಗಳು. ಈ ಪ್ರಕ್ರಿಯೆಯು 85 ದಿನಗಳನ್ನು ತೆಗೆದುಕೊಳ್ಳುತ್ತದೆ, ಕೇವಲ ಮೂರು ತಿಂಗಳೊಳಗೆ ನಾವು ಕಾರ್ಯಾಚರಣೆ ಹೆಚ್ಚಿಸಬೇಕಾಗಿದೆ. ಈ ವಿಷಯದ ಬಗ್ಗೆ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಸಾಲಕ್ಕಾಗಿ ಬ್ಯಾಂಕುಗಳನ್ನು ಸಂಪರ್ಕಿಸಲು ನಾವು ವಿಫಲವಾಗಿದ್ದೇವೆ''  ಎಂದು ಪೂನಾವಾಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News