ನಕ್ಸಲೀಯರೊಂದಿಗಿನ ಎನ್‌ಕೌಂಟರ್ ಸಂದರ್ಭ ಪೊಲೀಸರಿಂದ ಥಳಿತ: ಸ್ಥಳೀಯರ ಆರೋಪ

Update: 2021-04-07 16:55 GMT

ಹೊಸದಿಲ್ಲಿ, ಎ. 7: ಛತ್ತೀಸ್‌ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಹಾಗೂ ಭದ್ರತಾ ಪಡೆಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದ ಸಂದರ್ಭ ಇಲ್ಲಿನ ತೆಕ್ಲಾಗುಡಂ ಗ್ರಾಮದಲ್ಲಿ ಪೊಲೀಸರು ಕೆಲವರಿಗೆ ಥಳಿಸಿದ್ದಾರೆ ಗ್ರಾಮಸ್ತರು ಆರೋಪಿಸಿದ್ದಾರೆ.

ಮಾವೋವಾದಿಗಳು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆದ ಮೊದಲ ಸ್ಥಳ ತೆಕ್ಲಾಗುಡಂ ಗ್ರಾಮ ಎಂದು ಮೂಲಗಳು ತಿಳಿಸಿವೆ. ಅನಂತರ ಮಾವೋವಾದಿಗಳು ಪೊಲೀಸ್ ಸಿಬ್ಬಂದಿಯನ್ನು ತೆಕ್ಲಾಗುಡಂನಿಂದ 1 ಕಿ.ಮೀ. ದೂರದಲ್ಲಿರುವ ಝಿರಾಗಾಂವ್‌ನತ್ತೆ ಅಟ್ಟಿಸಿಕೊಂಡು ಹೋದರು. ಯೋಧರ 14 ಮೃತದೇಹಗಳು ಇದೇ ಗ್ರಾಮದಲ್ಲಿ ರವಿವಾರ ಪತ್ತೆಯಾಗಿತ್ತು.

 ನಾವು ಎಂದಿನಂತೆ ಶನಿವಾರ ಕೂಡ ಮನೆಯಿಂದ ಹೊರಗೆ ಹೋಗಿ ಕಾಡುತ್ವನ್ನವನ್ನು ಸಂಗ್ರಹಿಸುತ್ತಿದ್ದೆವು. ಈ ಸಂದರ್ಭ ಪೋಲೀಸ್ ಸಿಬ್ಬಂದಿ ನಮಗೆ ಕಬ್ಬಿಣದ ರಾಡ್ ಹಾಗೂ ಬಂದೂಕಿನ ಹಿಂಭಾಗದಿಂದ ಥಳಿಸಿದ್ದಾರೆ. ಈ ಕಾರಣಕ್ಕೆ ಗ್ರಾಮಕ್ಕೆ ಹಿಂದಿರುಗಿದವರಲ್ಲಿ ನಾನು ಕೂಡ ಓರ್ವ ಎಂದು ಗ್ರಾಮಸ್ಥ 20ರ ಹರೆಯದ ಮಂಗ್ಡು ಬಸೆರ್ ತಿಳಿಸಿದ್ದಾರೆ.

‘‘ಗ್ರಾಮಸ್ಥರನ್ನು ಗುರಿಯಾಗಿರಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಪಡೆ ಮಾವೋವಾದಿಗಳೊಂದಿಗೆ ಹೋರಾಟದಲ್ಲಿ ತೊಡಗಿತ್ತು. ನಾನು ಈ ಆರೋಪದ ಬಗ್ಗೆ ಪರಿಶೀಲಿಸುತ್ತೇನೆ’’ ಎಂದು ಬಸ್ತಾರ್‌ನ ಐ.ಜಿ. ಪಿ. ಸುಂದರ್ ರಾಜ್ ತಿಳಿಸಿದ್ದಾರೆ.

‘‘ಪೊಲೀಸರು ಬರುವುದು ನೋಡಿದಾಗ ನಾವು ಮನೆಯ ಒಳಗೆ ಸೇರಿ ಚಿಲಕ ಹಾಕಿಕೊಂಡೆವು. ಕೆಲವು ಗಂಟೆಗಳ ಬಳಿಕ ಭಾರಿ ಗುಂಡಿನ ಹಾರಾಟ ಹಾಗೂ ಓಡುತ್ತಿರುವ ಸದ್ದು ಕೇಳಿಸಿತು’’ ಎಂದು ತೆಕ್ಲಾಗುಡಂನ ಇನ್ನೋರ್ವ ನಿವಾಸಿ 29 ವರ್ಷದ ಭಿಮಾ ಕೊರ್ಸಾ ಹೇಳಿದ್ದಾರೆ.

ಮಾವೋವಾದಿಗಳು ಹಾಗೂ ಯೋಧರ ನಡುವಿನ ಗುಂಡಿನ ಚಕಮಕಿ ಸಂದರ್ಭ ತೆಕ್ಲಾಗುಡಂನ 150ಕ್ಕೂ ಅಧಿಕ ಸ್ಥಳೀಯರು ಕಾಡಿಗೆ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿಯ ನಡುವೆ ನಾವು ಸಿಲುಕಿಕೊಳ್ಳುತ್ತೇವೆ ಎಂಬ ಚಿಂತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News