ಕಾರ್ನಾಡು : ಮೈಮೂನ ಫೌಂಡೇಶನ್ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್ ಗೆ ಸೌತ್ ರಿಲೀಫ್ ಯೂನಿಯನ್ ತಂಡ ಭೇಟಿ

Update: 2021-04-07 18:34 GMT

ಕಾರ್ನಾಡು : ಮೈಮುನ ಫೌಂಡೇಶನ್ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್ ಕಾರ್ನಾಡು ಇಲ್ಲಿಗೆ ಸೌತ್ ರಿಲೀಫ್ ಯೂನಿಯನ್ ತಂಡ ಬುಧವಾರ ಭೇಟಿ ನೀಡಿತು.

ಸೌತ್ ರಿಲೀಫ್ ಯೂನಿಯನ್ ಸಂಸ್ಥೆಯ ಪದಾಧಿಕಾರಿ ಲತೀಫ್ ಗುರುಪುರ ಅವರ ಪುತ್ರಿ ರಿಝಾ ಫಾತಿಮರ ಜನ್ಮ ದಿನವನ್ನು ಆಶ್ರಮದಲ್ಲಿರುವ ನಿರ್ಗತಿಕರು, ಅನಾಥರೊಂದಿಗೆ ಆಚರಿಸಿದರು.

ಆಸಿಫ್ ಆಪತ್ಭಾಂದವ ಅವರು ಆಶ್ರಮದಲ್ಲಿರುವ ಜನರನ್ನು ನಕ್ಕು ನಗಿಸುತ್ತಾ ಅವರ ಆರೋಗ್ಯವನ್ನು ನೋಡುತ್ತಾ, ಅವರೊಂದಿಗೆ ಕಾಲ ಕಳೆಯುವುದನ್ನು ನೋಡಿ ನಮ್ಮ ಮನಸ್ಸಿಗೆ ತುಂಬಾ ಖುಷಿ ಆಯಿತು. ಉಳ್ಳವರು ಇಲ್ಲದವರಿಗೆ ದಾನವನ್ನು ಮಾಡುವುದರ ಮೂಲಕ ಅವರ ಸ್ವಲ್ಪ ಹೊರೆ ಕಡಿಮೆ ಮಾಡಬಹುದಾಗಿದೆ ಇದರಿಂದ ಬಡತನವನ್ನು ಕೊಂಚವಾದರೂ ತಗ್ಗಿಸಬಹುದು ಎಂದು ಸೌತ್ ರಿಲೀಫ್ ಯೂನಿಯನ್ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News