ಕೋವಿಡ್ ಲಸಿಕೆಯ ಎರಡನೇ ಡೋಸ್ ಸ್ವೀಕರಿಸಿದ ಪ್ರಧಾನಿ ಮೋದಿ

Update: 2021-04-08 05:03 GMT

Photo source: Twitter (@narendramodi)
 

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಅನ್ನು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಸ್ವೀಕರಿಸಿದರು. 

ಮೋದಿ ಅವರು ಮಾರ್ಚ್ 1ರಂದು ಭಾರತ್ ಬಯೋಟೆಕ್ ಉತ್ಪಾದನೆಯ ಕೋವ್ಯಾಕ್ಸಿನ್‍ ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದರು.

ಲಸಿಕೆಯ ಎರಡನೇ ಡೋಸ್ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಯಾರೆಲ್ಲಾ ಅರ್ಹರಿದ್ದಾರೋ ಅವರೆಲ್ಲರೂ ಕೋವಿಡ್-19 ವಿರುದ್ದದ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿಕೊಂಡಿದ್ದಾರೆ.

ನಾನು ಇಂದು ಏಮ್ಸ್ ನಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದಿದ್ದೇನೆ. ವೈರಸ್ ಅನ್ನು ಸೋಲಿಸಲು ನಮಗಿರುವ ಕೆಲವೇ ಮಾರ್ಗಗಳಲ್ಲಿ ಲಸಿಕೆ ಕೂಡ ಒಂದಾಗಿದೆ. ನೀವು ಲಸಿಕೆ ಸ್ವೀಕರಿಸಲು ಅರ್ಹರಿದ್ದರೆ ಶೀಘ್ರವೇ ಲಸಿಕೆ ಸ್ವೀಕರಿಸಿ ಎಂದು ಮೋದಿ ಟ್ವೀಟಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News