×
Ad

ಕೋವಿಡ್‌ ಹೆಚ್ಚಳಕ್ಕೆ ಜನಸಾಮಾನ್ಯರನ್ನು ದೂರಿದ್ದ ಆರೋಗ್ಯ ಸಚಿವರ ಟ್ವಿಟರ್‌ ತುಂಬಾ ಚುನಾವಣಾ ಸಮಾವೇಶದ ಪೋಸ್ಟ್ ಗಳು‌!

Update: 2021-04-08 12:59 IST

ಹೊಸದಿಲ್ಲಿ: ಕೋವಿಡ್ ಲಸಿಕೆಗಳ ಕೊರತೆಯಿದೆ ಎಂದು  ಮಹಾರಾಷ್ಟ್ರ ಹೇಳಿದ್ದಕ್ಕೆ ಪ್ರತಿಯಾಗಿ ನೀಡಿದ ಹೇಳಿಕೆಯಲ್ಲಿ  ಹಲವು ವಿಪಕ್ಷ ಆಡಳಿತದ ರಾಜ್ಯಗಳನ್ನು  ಬಹಿರಂಗವಾಗಿ ಟೀಕಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್, ಜತೆಗೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದಕ್ಕೆ  ಜನಸಾಮಾನ್ಯರನ್ನು ದೂರಿದ್ದಾರಲ್ಲದೆ ರಾಜಕೀಯ ಪಕ್ಷಗಳು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ್ದ ರ್ಯಾಲಿಗಳ ಕುರಿತು ಚಕಾರವೆತ್ತಿಲ್ಲ ಎಂದು scroll.in ವರದಿ ಮಾಡಿದೆ..

"ಜನಸಾಮಾನ್ಯರಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯ ಕೊರತೆಯಿಂದಾಗಿ ಕೋವಿಡ್ 2ನೇ ಅಲೆ ಕಾಣಿಸಿಕೊಂಡಿದೆ. ಜನರು ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡಿದ್ದಾರೆ, ಯಾರಿಗೂ ಮಾಸ್ಕ್ ಧರಿಸಲು ಆಸಕ್ತಿಯಿಲ್ಲ, ಸಾಮಾಜಿಕ ಅಂತರ ನಿಯಮಕ್ಕೆ ಯಾರೂ ಬೆಲೆ ನೀಡುತ್ತಿಲ್ಲ, ಎಂದು ಸಚಿವರು ಹೇಳಿದ್ದಾರೆ.

ಆದರೆ ಸಚಿವರ ಟ್ವಿಟ್ಟರ್ ಫೀಡ್ ಗಮನಿಸಿದರೆ ʼಎಲ್ಲವನ್ನೂ ಸಹಜವಾಗಿ ಹಾಗೂ ಲಘುವಾಗಿ ಪರಿಗಣಿಸಿದ್ದಕ್ಕೆʼ ಯಾರನ್ನು ದೂರಬೇಕೆಂಬುದು ಸಾಕಷ್ಟು ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ವಿವಿಧೆಡೆ ನಡೆಸಿದ ಬೃಹತ್ ಚುನಾವಣಾ ರ್ಯಾಲಿ ಕುರಿತಾದ ಪೋಸ್ಟ್ ಗಳು ಸಚಿವರ ಟ್ವಿಟ್ಟರ್ ಫೀಡ್‍ನಲ್ಲಿದೆ. ಹೆಚ್ಚಿನವರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಈ ರ್ಯಾಲಿಗಳಲ್ಲಿ ಭಾಗವಹಿಸಿದ್ದರೂ ಈ ಬಗ್ಗೆ ಸಚಿವರು ಚಕಾರವೆತ್ತಿಲ್ಲ ಎಂದು ವರದಿ ತಿಳಿಸಿದೆ.

 ಇದರ ನಡುವೆ "ಅಸ್ಸಾಂನಲ್ಲಿ ಕೋವಿಡ್ ಇಲ್ಲ, ಮಾಸ್ಕ್ ಧರಿಸುವ ಅಗತ್ಯವಿಲ್ಲ" ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದರೆ ಉತ್ತರಾಖಂಡ ಸೀಎಂ ತೀರತ್ ಸಿಂಗ್ ರಾವತ್ ಅವರು ``ಅನಗತ್ಯ ನಿರ್ಬಂಧಗಳು ಅಗತ್ಯವಿಲ್ಲ, ನಂಬಿಕೆಯು ಕೋವಿಡ್‌ ಅನ್ನು ಸೋಲಿಸಬಹುದು' ಎಂದಿದ್ದರು. ಇದು ಸಾಲದೆಂಬಂತೆ ಸಾವಿರಾರು ಮಂದಿ ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇವುಗಳ ಬಗ್ಗೆ ಯಾವುದೇ ಮಾತುಗಳನ್ನಾಡದ ಹರ್ಷ ವರ್ಧನ್ ಕೇವಲ ಜನಸಾಮಾನ್ಯರನ್ನು ಮಾತ್ರ ಏಕೆ ದೂರುತ್ತಿದ್ದಾರೆ? ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News