ಬ್ರಿಟನ್ ರಾಣಿ ಎಲಿಝಬೆತ್ ಪತಿ, ಪ್ರಿನ್ಸ್ ಫಿಲಿಪ್ ನಿಧನ

Update: 2021-04-09 12:02 GMT

ಲಂಡನ್: ಬ್ರಿಟನ್ ರಾಣಿ ಎಲಿಝಬೆತ್ ಅವರ ಪತಿ, ಪ್ರಿನ್ಸ್ ಫಿಲಿಪ್ ಅವರು  ಇಂದು ನಿಧನರಾಗಿದ್ದಾರೆಂದು ಬಕಿಂಗ್‍ಹ್ಯಾಮ್ ಅರಮನೆ ತಿಳಿಸಿದೆ. ಪ್ರಿನ್ಸ್ ಫಿಲಿಪ್ ಅವರಿಗೆ 99 ವರ್ಷ ವಯಸ್ಸಾಗಿತ್ತು.

ಫಿಲಿಪ್ ಅವರು ಈ ವರ್ಷ ಫೆಬ್ರವರಿ 16ರಂದು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರಲ್ಲದೆ ಮಾರ್ಚ್ 16ರಂದು ಬಿಡುಗಡೆಗೊಂಡು ಅಂದಿನಿಂದ ವಿಂಡ್ಸರ್ ಅರಮನೆಯಲ್ಲಿದ್ದರು.

ಡ್ಯೂಕ್ ಆಫ್ ಎಡಿನ್‍ ಬರ್ಗ್ ಎಂದೂ ಕರೆಯಲ್ಪಡುವ ಫಿಲಿಪ್ ಅವರು ರಾಣಿ ಎಲಿಝಬೆತ್ ಅವರನ್ನು 1947ರಲ್ಲಿ ವಿವಾಹವಾಗಿದ್ದರು. 2017ರಿಂದೀಚೆಗೆ ಅವರು ಯಾವುದೇ ಸಮಾರಂಭಗಳಲ್ಲಿ ಕಾಣಿಸಿರಲಿಲ್ಲ. ಗ್ರೀಕ್ ರಾಜಮನೆತನದ ಸದಸ್ಯರಾಗಿದ್ದ ಫಿಲಿಪ್ ಅವರು ಗ್ರೀಸ್ ದ್ವೀಪ ಕೊರ್ಫು ಎಂಬಲ್ಲಿ 1921ರಲ್ಲಿ ಜನಿಸಿದ್ದರು.

ಕಳೆದ ವರ್ಷದ ನವೆಂಬರಿನಲ್ಲಿ ಪ್ರಿನ್ಸ್ ಫಿಲಿಪ್ ಹಾಗೂ ರಾಣಿ ಎಲಿಝಬೆತ್ ತಮ್ಮ 73ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಪ್ರಿನ್ಸ್ ಫಿಲಿಪ್ ಈ ವರ್ಷದ ಜೂನ್ ತಿಂಗಳಲ್ಲಿ ತಮ್ಮ ನೂರನೇ ಹುಟ್ಟು ಹಬ್ಬ ಆಚರಿಸಲಿದ್ದರು. ಅವರಿಗೆ ಪ್ರಿನ್ಸ್ ಚಾಲ್ರ್ಸ್ ಸಹಿತ ನಾಲ್ಕು ಮಂದಿ ಮಕ್ಕಳು, ಎಂಟು ಮೊಮ್ಮಕ್ಕಳು ಹಾಗೂ ಒಂಬತ್ತು ಮರಿಮೊಮ್ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News