ಮುಸ್ಲಿಂ ವಿರೋಧಿ ದ್ವೇಷಭಾಷಣ ನಿಯಂತ್ರಣಕ್ಕೆ ವಿಫಲ: ಫೇಸ್‌ ಬುಕ್‌ ವಿರುದ್ಧ ಮೊಕದ್ದಮೆ ದಾಖಲು

Update: 2021-04-09 14:34 GMT

ನ್ಯೂಯಾರ್ಕ್: ಫೇಸ್‌ ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿರೋಧ ದ್ವೇಷಭಾಷಣ ನಿಯಂತ್ರಣ ಮಾಡಲು ಸಂಸ್ಥೆಯು ವಿಫಲವಾಗಿದೆ ಎಂದು ಆರೋಪಿಸಿ ʼಮುಸ್ಲಿಂ ಅಡ್ವೊಕೇಟ್ಸ್ʼ ಎಂಬ ನಾಗರಿಕ ಸ್ವಾತಂತ್ರ್ಯ ಸಂಸ್ಥೆ ಫೇಸ್‌ಬುಕ್ ಮತ್ತು ವಾಷಿಂಗ್ಟನ್ ಡಿ.ಸಿ ಯಲ್ಲಿರುವ ಅದರ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದೆ ಎಂದು ತಿಳಿದು ಬಂದಿದೆ.

ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ ಬರ್ಗ್, ಸಿಇಒ ಶೆರಿಲ್ ಸ್ಯಾಂಡ್‌ ಬರ್ಗ್ ಮತ್ತು ಇತರ ಅಧಿಕಾರಿಗಳು “ಕಂಪನಿಯು ತನ್ನ ಮಾನದಂಡ ಮತ್ತು ನೀತಿ ನಿಯಮಗಳನ್ನು ಉಲ್ಲಂಘಿಸುವ ವಿಷಯವನ್ನು ತೆಗೆದುಹಾಕುತ್ತದೆ ಎಂದು ತಪ್ಪಾಗಿ ಹೇಳುವ ಮೂಲಕ ಕಾಂಗ್ರೆಸ್ ಮತ್ತು ಗ್ರಾಹಕರನ್ನು ವಂಚಿಸಿದ್ದಾರೆ” ಎಂದು ವಕೀಲರ ಗುಂಪು ಆರೋಪಿಸಿದೆ. ಸಂಸ್ಥೆಯ ಈ ವೈಫಲ್ಯದ ಕಾರಣದಿಂದಾಗಿ ಫೇಸ್‌ ಬುಕ್‌ ನಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಹೆಚ್ಚಿದೆ ಎಂದು ಅದು ಹೇಳಿಕೆ ನೀಡಿದೆ.

"ನಮ್ಮ ವೇದಿಕೆಯಲ್ಲಿ ದ್ವೇಷದ ಭಾಷಣವನ್ನು ನಾವು ಅನುಮತಿಸುವುದಿಲ್ಲ ಮತ್ತು ಫೇಸ್‌ ಬುಕ್ ಎಲ್ಲರಿಗೂ ಸುರಕ್ಷಿತ ಸ್ಥಳವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಿಯಮಿತವಾಗಿ ತಜ್ಞರು, ಲಾಭ ರಹಿತ ಮತ್ತು ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತೇವೆ" ಎಂದು ಫೇಸ್‌ ಬುಕ್ ವಕ್ತಾರರು ತಿಳಿಸಿದ್ದಾಗಿ ʼದಿ ಹಿಂದೂʼ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News