ಸೈನಿಕರ ಮೇಲೆ ಜನರ ಗುಂಪು ಮೊದಲಿಗೆ ದಾಳಿ ಮಾಡಿತ್ತು: ಸಿಐಎಸ್ ಎಫ್ ಸ್ಪಷ್ಟನೆ

Update: 2021-04-10 10:17 GMT

ಕೋಲ್ಕತಾ: ಕೂಚ್ ಬೆಹಾರದಲ್ಲಿ ಸಿಐಎಸ್ ಎಫ್ ಗುಂಡಿನ ದಾಳಿಗೆ ನಾಲ್ವರು ಮೃತಪಟ್ಟಿರುವ ಕುರಿತು ಟಿಎಂಸಿ, ಬಿಜೆಪಿ, ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ವಾಗ್ದಾಳಿ ನಡೆಸಿದ ಬಳಿಕ ಭದ್ರತಾ ಪಡೆ ಹೇಳಿಕೆಯೊಂದನ್ನು ನೀಡಿದ್ದು, ಸೈನಿಕರ ಮೇಲೆ ಜನರ ಗುಂಪು ಮೊದಲಿಗೆ ದಾಳಿ ಮಾಡಿತ್ತು ಎಂದಿದೆ.

5ರಿಂದ 6ರಷ್ಟಿದ್ದ ದುಷ್ಕರ್ಮಿಗಳು ಗಂಭೀರ ಗಾಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಸಿಐಎಸ್ ಎಫ್‍ ತಿಳಿಸಿದೆ..

ಘಟನೆಯ ಕುರಿತು ವಿವರವಾದ ಹೇಳಿಕೆ ನೀಡಿರುವ ಸಿಐಎಸ್ ಎಫ್: ಬೆಳಗ್ಗೆ 9:30ರ ಸುಮಾರಿಗೆ ಬೂತ್ ಸಂಖ್ಯೆ 126ರ ಸಮೀಪ ಕೋಯ್ ಕಮಾಂಡರ್ ಇನ್ಸ್‍ಪೆಕ್ಟರ್ ಇ.ಸುನೀಲ್ ಕುಮಾರ್ ನೇತೃತ್ವದ ಸಿಐ ಎಸ್ ಎಫ್ 567 ಕ್ಯೂ ಆರ್ ಟಿ(ಕ್ಷಿಪ್ರ ಕಾರ್ಯ ಪಡೆ)ಮೇಲೆ 50ರಿಂದ 60ರಷ್ಟಿದ್ದ ಜನರ ಗುಂಪೊಂದು ದಾಳಿ ಮಾಡಿದೆ. ಮತದಾರರಿಗೆ ಮತಗಟ್ಟೆ ಸಮೀಪಕ್ಕೆ ತಲುಪಲು ಸ್ಥಳೀಯ ಪೊಲೀಸರೊಂದಿಗೆ ಸಿಐಎಸ್ ಎಫ್ ತೆರಳಿತ್ತು.

ಒಂದು ಮಗು ಕೆಳಗೆ ಬಿದ್ದ ಬಳಿಕ ಜನರ ಗುಂಪು ಸಿಐಎಸ್ ಎಫ್ ತಂಡದ ವಾಹನಗಳನ್ನು ಧ್ವಂಸಗೊಳಿಸಿತು. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿತು ಎಂದು ಸಿಐಎಸ್ ಎಫ್ ತಿಳಿಸಿದೆ.

ಕ್ಷಿಪ್ರ ಕಾರ್ಯಪಡೆ ತಮ್ಮ ಆತ್ಮರಕ್ಷಣೆಗೆ, ಗುಂಪನ್ನು ಚದುರಿಸಲು ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿತು.  ದೀಪಕ್ ಕುಮಾರ್ ಸ್ಥಳಕ್ಕೆ ಬಂದು ಜನರನ್ನು ಸಮಾಧಾನಪಡಿಸಿದರು. ಸಿತಾಲ್ಕುಚಿ ಮತದಾನ ಕೇಂದ್ರದ ಹೊರಗಿನ ಕೂಚ್ ಬಿಹಾರದ ಮಾತಾಭಂಗದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಪಡೆಗಳು ಸ್ಥಳೀಯರ ದಾಳಿಗೆ ಒಳಗಾಗುತ್ತಲೇ ಗುಂಡು ಹಾರಿಸಿದರು. ಇದರಿಂದ ನಾಲ್ವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News