ಎ.11: ಸುಳ್ಯ ಗಾಂಧಿನಗರ ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆ

Update: 2021-04-10 12:37 GMT

ಸುಳ್ಯ: ಸುಳ್ಯ ಗಾಂಧಿನಗರ ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆ ಎ.11ರಂದು ಸಂಜೆ.4ಕ್ಕೆ ನಡೆಯಲಿದೆ. ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ‌ ಕೂರತ್ ವಕ್ಫ್ ನಿರ್ವಹಿಸುವರು. ಅಖಿಲ ಭಾರತ ಜಂಇಯ್ಯತುಲ್ ಉಲಮಾ ಹಾಗೂ ಮರ್ಕಸ್ ಕ್ಯಾಲಿಕಟ್ ಇದರ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟನೆ ನೆರವೇರಿಸುವರು. ಸಿರಾಜುಲ್ ಹುದಾ ಕುಟ್ಯಾಡಿ ಸ್ಥಾಪಕ ಪೆರೋಡ್ ಅಬ್ದುರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.

ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಆದಂಕುಂಞ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಸದಸ್ಯ ಶಾಫಿ ಸಅದಿ, ದ.ಕ.ಜಿಲ್ಲಾ ವಕ್ಸ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News