ಕ್ಷಯ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ

Update: 2021-04-10 13:24 GMT

ಕುಂದಾಪುರ, ಎ.10: ದಿ ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ (ನಮ್ಮಭೂಮಿ) ನಳಂದ ವಿದ್ಯಾಪೀಠದಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಕ್ಷಯರೋಗ ವಿಭಾಗದ ಮೇಲ್ವಿಚಾರಕ ಡಾ. ಗುರುದಾಸ್ ಕ್ಷಯರೋಗದ ಲಕ್ಷಣ, ಅದರ ಹರಡುವಿಕೆ, ಅದರಿಂದಾಗುವ ತೊಂದರೆ ಮತ್ತು ಸರಕಾರದಿಂದ ನೀಡುವ ಉಚಿತ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡರು.

ಆಪ್ತ ಸಮಾಲೋಚಕರಾದ ಡಾ. ನಳಿನಿ ಮಾತನಾಡಿ, ಕ್ಷಯ ರೋಗವನ್ನು 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದ್ದು, ಅದರಲ್ಲಿಯೂ ಭಾರತ 2025ರೊಳಗೇ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬೇಕೆಂದು ಗುರಿಯನ್ನು ಹಾಕಿಕೊಂಡಿದೆ ಎಂದರಲ್ಲದೇ, ಕ್ಷಯ ರೋಗ ಬರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿಯನ್ನು ತಿಳಿಸಿದರು.

ಬಳಿಕ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ಮಕ್ಕಳು ಕ್ಷಯ ರೋಗದ ಬಗ್ಗೆ ತಮಗಿರುವ ಸಂದೇಹಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ನಮ್ಮಭೂಮಿಯ ತರಬೇತಿ ಮಕ್ಕಳು, ಶಾಲಾ ಮಕ್ಕಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News