ಕಲೆ ಎಲ್ಲ ಒತ್ತಡದಿಂದ ಹೊರ ಬರುವ ಸಾಧನ: ಕಾತ್ಯಾಯಿನಿ ಕುಂಜಿಬೆಟ್ಟು

Update: 2021-04-10 15:28 GMT

ಉಡುಪಿ, ಎ.10: ಕಲೆ ಎಂಬುದು ಅಭಿವ್ಯಕ್ತಿ ಹಾಗೂ ನಮ್ಮದೇ ಪಂಜರ ದೊಳಗಿನಿಂದ ಮಹಾ ಬಿಡುಗಡೆಯಾಗಿದೆ. ಕಲೆ ಎಲ್ಲ ಒತ್ತಡದಿಂದ ಹೊರ ಬರುವ ಸಾಧನವಾಗಿದೆ ಎಂದು ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದ್ದಾರೆ.

ಪರ್ಕಳ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನದ ವತಿಯಿಂದ ಪರ್ಕಳ ಭಗಿನಿ ಮಹಿಳಾ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಹಕಾರದೊಂದಿಗೆ ಶನಿವಾರ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ‘ತೊಟ್ಟಿಲು ತೂಗುವ ಕೈಗಳು’ ಸಾಧಕಿಯರೊಂದಿಗೆ ಸುಂದರ ಸಂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿೀಕರಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಪರ್ಕಳ ಭಗಿನಿ ಮಹಿಳಾ ಮಂಡಳಿಯ ಗಿೀತಾಶ್ರೀ ಉಪಾಧ್ಯಾಯ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಹರೀಶ್ ಜೋಶಿ ಸ್ವಾಗತಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಲ್ಪಾ ಜೋಶಿ ಅವರಿಂದ ನನ್ನೊಳಗಿನ ಅವಳು ಏಕ ವ್ಯಕ್ತಿ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News