ದ.ಕ.ಜಿಲ್ಲೆ: ನಿಧಾನಗತಿಯಲ್ಲಿ ಸಂಚಾರ ಆರಂಭಿಸಿದ ಸರಕಾರಿ ಬಸ್‌ಗಳು

Update: 2021-04-10 16:32 GMT

ಮಂಗಳೂರು,ಎ.10:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆದಿದೆ. ಆದರೆ ನಗರದಲ್ಲಿ ಶನಿವಾರ ನಿಧಾನಗತಿಯಲ್ಲಿ ಸರಕಾರಿ ಬಸ್ ಸಂಚಾರ ಆರಂಭಗೊಂಡಿದೆ.

ಶನಿವಾರ ಬೆಳಗ್ಗೆಯಿಂದ ಕೋಯಮತ್ತೂರು, ಮಧುರೈ, ಸುಬ್ರಹ್ಮಣ್ಯ, ಬೆಂಗಳೂರು, ಮೈಸೂರು, ಬಾಗಲಕೋಟೆ, ಧರ್ಮಸ್ಥಳ, ಕಾಸರಗೋಡು ಸಹಿತ ನಾನಾ ರೂಟ್‌ಗಳಲ್ಲಿ 100ಕ್ಕೂ ಅಧಿಕ ಬಸ್‌ಗಳು ಸಂಚರಿಸಿವೆ. ಇನ್ನೊಂದೆರಡು ದಿನದಲ್ಲಿ ಮತ್ತಷ್ಟು ಸರಕಾರಿ ಬಸ್‌ಗಳು ಓಡಾಟವನ್ನು ಆರಂಭಿಸಲಿವೆ ಎಂದು ತಿಳಿದು ಬಂದಿವೆ. ಈ ಮಧ್ಯೆ ಕೆಲವು ಖಾಸಗಿ ಬಸ್‌ಗಳು ಕೂಡ ಖಾಸಗಿ ಬಸ್‌ಗಳು ಕೂಡ ಬಿಜೈ ಸರಕಾರಿ ಬಸ್ ನಿಲ್ದಾಣದಿಂದ ಓಡುತ್ತಿವೆ.

ವೈದ್ಯಕೀಯ ಪ್ರಮಾಣ ಪತ್ರ: ಕೆಎಸ್ಸಾರ್ಟಿಸಿ ನೌಕರರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ನಿಗಮದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ 62 ವರ್ಷ ಮೀರದ ಚಾಲಕ ಮತ್ತು ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆಗೆ ಅವಕಾಶ ಕಲ್ಪಿಸಿದ ಕಾರಣ 38 ಮಂದಿ ನಿವೃತ್ತರು ಆಸಕ್ತಿ ತೋರಿದ್ದಾರೆ. ಅವರಿಗೆ ಕೋವಿಡ್ ವೈದ್ಯಕೀಯ ಪ್ರಮಾಣ ಪತ್ರವನ್ನು ಸಿದ್ಧಪಡಿಸಿಟ್ಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಾಗ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ತಿಳಿಸಿದ್ದಾರೆ.

17 ಮಂದಿ ವರ್ಗಾವಣೆ: ಮಂಗಳೂರು ವಿಭಾಗದಿಂದ ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿ ಸಹಿತ 15 ಮಂದಿ ಮತ್ತು ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ರಾಮನಗರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News