ಲಾಕ್‌ಡೌನ್ ಹೇರಿಕೆಗೆ ಗುಜರಾತ್ ಸರಕಾರದ ಒಲವಿಲ್ಲ: ರೂಪಾನಿ

Update: 2021-04-10 18:28 GMT

 ಅಹ್ಮದಾಬಾದ್, ಎ. 10: ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವ ಹೊರತಾಗಿಯೂ, ಬಡವರ ಮೇಲಾಗುವ ಪರಿಣಾಮವನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಲಾಕ್‌ಡೌನ್ ಹೇರುವುದಕ್ಕೆ ತನ್ನ ಸರಕಾರದ ಒಲವಿಲ್ಲವೆಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸುವ ಮತ್ತು ಚಿಕಿತ್ಸೆಯನ್ನು ಸೂಚಿಸುವ 20 ನೂತನ ಧನ್ವಂತರಿ ವಾಹನಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲಾಕ್‌ಡೌನ್ ಹೇರಿದಲ್ಲಿ ಬಡಜನರು ತೀವ್ರವಾಗಿ ಬಾಧಿತರಾಗುತ್ತಾರೆಂದು ಅಭಿಪ್ರಾಯಿಸಿದರು. ಆದಾಗ್ಯೂ ಗ್ರಾಮಗಳು ಅಥವಾ ನಗರಗಳಲ್ಲಿನ ಮಾರುಕಟ್ಟೆ ಸಂಘಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಹೇರುವುದನ್ನು ತಾನು ಸ್ವಾಗತಿಸುವೆ’’’ ಎಂದವರು ಹೇಳಿದರು.

   ಈಗಾಗಲೇ ಜನರ ಅನಗತ್ಯ ಸಂಚಾರವನ್ನು ನಿರ್ಬಂಧಿಸಲು ದಿನದಲ್ಲಿ 10 ತಾಸುಗಳ ಲಾಕ್‌ಡೌನ್ ಹೇರಲಾಗಿದೆ’’ ಎಂದು ರೂಪಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News