×
Ad

ಟಿಆರ್‌ಪಿ ಹಗರಣದಲ್ಲೂ ಲಂಚ ಪಡೆದಿದ್ದ ವಾಝೆ: ಇಡಿ

Update: 2021-04-11 09:38 IST

ಮುಂಬೈ, ಎ.11: ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣದ ಸಂಬಂಧ ಬಂಧಿತನಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಟಿಆರ್‌ಪಿ ಹಗರಣದಲ್ಲೂ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಿಎಆರ್‌ಸಿ) ನಿಂದಲೂ 30 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂದು ಕಾನೂನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.

ಬಿಎಆರ್‌ಸಿ ಉನ್ನತ ಅಧಿಕಾರಿಗಳಿಗೆ ಟಿಆರ್‌ಪಿ ಹಗರಣ ಸಂಬಂಧ ಕಿರುಕುಳ ನೀಡಬಾರದು ಎಂದಾದಲ್ಲಿ 30 ಲಕ್ಷ ರೂಪಾಯಿ ನೀಡಬೇಕು ಎಂದು ಇನ್‌ಸ್ಪೆಕ್ಟರ್ ಒಬ್ಬರ ಮೂಲಕ ಆಗ್ರಹಪಡಿಸಿದ್ದರು ಎಂದು ಇಡಿ ಮೂಲಗಳು ಹೇಳಿವೆ.

ವಾಝೆಗೆ ಲಂಚ ನೀಡಿರುವ ಬಗ್ಗೆ ಬಿಎಆರ್‌ಸಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಬಿಎಆರ್‌ಸಿ ಆವರಣದಲ್ಲಿ ನಡೆದ ನಿರ್ಮಾಣ ಕಾಮಗಾರಿಗೆ ಪಾವತಿಸಿದಂತೆ ದಾಖಲೆ ಸೃಷ್ಟಿಸಿ ಡಮ್ಮಿ ಕಂಪೆನಿಯೊಂದರ ಖಾತೆಗೆ ವರ್ಗಾಯಿಸಿ ವಾಝೆಗೆ ಲಂಚ ನೀಡಿದ್ದಾಗಿ ತಿಳಿದುಬಂದಿದೆ. ಬಿಎಆರ್‌ಸಿ ಹನ್ಸಾ ಸಮೂಹದ ಮೂಲಕ ಬಾರೋಮೀಟರ್‌ಗಳನ್ನು ಆಯ್ದ ಮನೆಗಳಲ್ಲಿ ಅಳವಡಿಸಿ, ವೀಕ್ಷಣಾ ಪ್ರವೃತ್ತಿಯನ್ನು ಅಳೆದು ರೇಟಿಂಗ್ ನಿರ್ಧರಿಸುತ್ತಿತ್ತು.

ಬಿಎಆರ್‌ಸಿ ವತಿಯಿಂದ ಲಂಚ ನೀಡಿರುವ ಬಗ್ಗೆ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ ಇದು ದೃಢಪಟ್ಟಿದೆ. ಆದರೆ ಇಡಿ ಇನ್ನೂ ಈ ಸಂಬಂಧ ವಾಝೆ ಅವರನ್ನು ವಿಚಾರಣೆಗೆ ಗುರಿಪಡಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News