×
Ad

ಉದ್ಯಮಿ ಯೂಸುಫ್ ಅಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್

Update: 2021-04-11 11:11 IST

ಕೊಚ್ಚಿ: ಉದ್ಯಮಿ ಎಂಎ ಯೂಸುಫ್ ಅಲಿ ಹಾಗೂ ಇತರ ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಕೇರಳದ ಕೊಚ್ಚಿ ನಗರದಲ್ಲಿ ರವಿವಾರ ತುರ್ತು ಲ್ಯಾಂಡಿಂಗ್ ಆಗಿದೆ.

ಪನಾನ್ ಗಡದ ಕೇರಳ ಯುನಿವರ್ಸಿಟಿ ಆಫ್ ಫಿಶರೀಸ್, ಓಸಿಯನ್ ಸ್ಟಡೀಸ್ ಕ್ಯಾಂಪಸ್ ಸಮೀಪ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಿದೆ.

ಎಲ್ಲ ಐವರು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯೂಸುಫ್ ಅಲಿ  ಹಾಗೂ ಅವರ ಪತ್ನಿ ಸುರಕ್ಷಿತವಾಗಿದ್ದಾರೆ. ತಪಾಸಣೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News