ಕೇರಳ: ರಾಜ್ಯಸಭೆ ಸ್ಥಾನಗಳಿಗೆ ಮೇ 2ರ ಒಳಗೆ ಚುನಾವಣೆ ನಡೆಸಲು ಆದೇಶ

Update: 2021-04-12 15:31 GMT

ತಿರುವನಂತಪುರಂ, ಎ.12: ಕೇರಳದಲ್ಲಿ ಎಪ್ರಿಲ್ 21ರಂದು ತೆರವಾಗಲಿರುವ 3 ರಾಜ್ಯಸಭೆ ಸ್ಥಾನಗಳಿಗೆ, ಹಾಲಿ ಸರಕಾರದ ಅವಧಿ ಮುಗಿಯುವ ಮೇ 2ರೊಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಕೇರಳ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ವಿಧಾನಸಭೆಯ ನಿರ್ಗಮಿತ ಸದಸ್ಯರಿಗೆ ಮತ ಚಲಾಯಿಸುವ ಅಧಿಕಾರವಿದೆ ಎಂಬುದನ್ನು ಗಮನಿಸಿ ಕೇರಳ ಹೈಕೋರ್ಟ್‌ನ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ ಎಂದು ಮೂಲಗಳು ಹೇಳಿವೆ. ಕೇರಳದಿಂದ ತೆರವಾಗುವ ರಾಜ್ಯಸಭೆಯ 3 ಸ್ಥಾನಗಳಿಗೆ ಮೇ 2ರ ಬಳಿಕ(ಹೊಸ ಸರಕಾರ ರಚನೆಯಾದ ಬಳಿಕ) ಚುನಾವಣೆ ನಡೆಸುವ ಇಂಗಿತವನ್ನು ಚುನಾವಣಾ ಆಯೋಗ ವ್ಯಕ್ತಪಡಿಸಿತ್ತು.

ಆದರೆ ಹೀಗೆ ಮಾಡಿದರೆ, ವಿಧಾನಸಭೆಯ ನಿರ್ಗಮಿತ ಸದಸ್ಯರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹಾಲಿ ಸರಕಾರದ ಅವಧಿ ಮೇ 2ರವರೆಗೆ ಇರುವುದರಿಂದ, ಎಪ್ರಿಲ್ 21ರಂದು ತೆರವಾಗುವ ಸ್ಥಾನಗಳಿಗೆ ತಕ್ಷಣ ಚುನಾವಣೆ ನಡೆಸಬೇಕು ಎಂದು ಕೋರಿ ಸಿಪಿಐ(ಎಂ) ಶಾಸಕ ಎಸ್. ಶರ್ಮ ಕಳೆದ ವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News