ದಿಲ್ಲಿಯಲ್ಲಿ 13,500 ಹೊಸ ಕೋವಿಡ್‌ ಪ್ರಕರಣಗಳು: ಬೋರ್ಡ್‌ ಪರೀಕ್ಷೆ ರದ್ದುಗೊಳಿಸುವಂತೆ ಸಿಎಂ ಕೇಜ್ರಿವಾಲ್‌ ಸೂಚನೆ

Update: 2021-04-13 08:42 GMT

ಹೊಸದಿಲ್ಲಿ: 13,500 ನೂತನ ಕೋವಿಡ್‌ ಪ್ರಕರಣಗಳೊಂದಿಗೆ ದಿಲ್ಲಿಯು ದೈನಂದಿನ ಸೋಂಕುಪೀಡಿತರ ಸಂಖ್ಯೆಯಲ್ಲಿ ದಾಖಲೆ ನಿರ್ಮಿಸಿದೆ. ಒಟ್ಟು 7,36,788 ಪ್ರಕರಣಗಳು ದಿಲ್ಲಿಯಲ್ಲಿ ದಾಖಲಾಗಿದೆ. ಸತತ ಮೂರನೇ ದಿನ ದಿಲ್ಲಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಬೋರ್ಡ್‌ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಗರವು 13,500 ನೂತನ ಪ್ರಕರಣಗಳನ್ನು ದಾಖಲಿಸಿದೆ. ನವೆಂಬರ್‌ ನಲ್ಲಿ ಕೋವಿಡ್‌ ಪರಿಸ್ಥಿತಿಯು ಉತ್ತುಂಗದಲ್ಲಿದ್ದ ವೇಳೆ ದೈನಂದಿನ 8,500 ಪ್ರಕರಣಗಳು ಕಂಡು ಬರುತ್ತಿತ್ತು. ಆದರೆ ಈಗ ಸಂಖ್ಯೆ ಹೆಚ್ಚಾಗಿದೆ. ಎಲ್ಲರಿಗೂ ತಿಳಿದಿರುವಂತೆ ನಾಲ್ಕನೆ ಅಲೆಯು ತುಂಬಾ ಅಪಾಯಕಾರಿಯಾಗಿದೆ. ಇದು ಮಕ್ಕಳು ಮತ್ತು ಯುವಕರ ಮೇಲೆ ಪರಿಣಾಮ ಬೀರುತ್ತದೆ" ಎಂದು ತಮ್ಮ ವೀಡಿಯೊ ಸಂದೇಶದಲ್ಲಿ ಕೇಜ್ರಿವಾಲ್‌ ಹೇಳಿಕೆ ನೀಡಿದ್ದಾರೆ.

"ಸಂಪೂರ್ಣವಾಗಿ ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಬರಲು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ" ಎಂದು ಅವರು ಹೇಳಿದರು, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಒತ್ತಾಯಿಸಿದರು.

"ನಗರದಲ್ಲಿ ಆರು ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ಹಾಜರಾಗಲಿದ್ದಾರೆ. 1 ಲಕ್ಷ ಶಿಕ್ಷಕರು ಕರ್ತವ್ಯದಲ್ಲಿರುತ್ತಾರೆ. ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಕರೋನವೈರಸ್ ಹರಡಲು ಕಾರಣವಾಗಬಹುದು. ಮೌಲ್ಯಮಾಪನದ ಪರ್ಯಾಯ ವಿಧಾನಗಳನ್ನು ಅನ್ವೇಷಿಸಬಹುದು ಎಂದು ಹೇಳಿದ ಕೇಜ್ರಿವಾಲ್‌, ಪರೀಕ್ಷೆಗಳನ್ನು ರದ್ದುಪಡಿಸುವಂತೆ ಕೇಂದ್ರವನ್ನು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News