×
Ad

ನವರಾತ್ರಿ ಹಬ್ಬದ ಹಿನ್ನೆಲೆ: ರಾತ್ರಿ ಕರ್ಫ್ಯೂ ಅವಧಿ ಕಡಿತಗೊಳಿಸಿದ ಉತ್ತರಾಖಂಡ ಮುಖ್ಯಮಂತ್ರಿ

Update: 2021-04-13 17:58 IST

ಡೆಹ್ರಾಡೂನ್: ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳ ನಡುವೆಯೂ ರಾತ್ರಿ ಕರ್ಫ್ಯೂ ಅವಧಿಯನ್ನು ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಕಡಿತಗೊಳಿಸಿದ್ದಾರೆ.

ಈಗಾಗಲೇ ರಾತ್ರಿ ಕರ್ಫ್ಯೂ ಹೇರಲ್ಪಟ್ಟ ಸ್ಥಳಗಳಲ್ಲಿ ಕರ್ಫ್ಯೂ ಅವಧಿ ಇನ್ನು ಮುಂದೆ ರಾಜ್ಯದಲ್ಲಿ 10.30ಯಿಂದ  ಬೆಳಿಗ್ಗೆ 5 ಗಂಟೆ ತನಕ ಜಾರಿಯಲ್ಲಿರಲಿದೆ ಎಂದು ಸಿಎಂ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ರಾಜ್ಯ ಸರಕಾರ ಈ ಹಿಂದೆ  ಡೆಹ್ರಾಡೂನ್‍ ನಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ತನಕ ಕರ್ಫ್ಯೂ ಹೇರಿತ್ತು. ಇಗಾಗಲೇ  ಡೆಹ್ರಾಡೂನ್, ಹಲ್ದ್ವಾನಿ ಹಾಗೂ ಹರಿದ್ವಾರದಲ್ಲಿ ಎಪ್ರಿಲ್ 30ರ ತನಕ  ಒಂದರಿಂದ ಹತ್ತನೇ ತರಗತಿ ತನಕದ  ಶಾಲೆಗಳನ್ನು ಮುಚ್ಚಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಎಪ್ರಿಲ್ 13ರಿಂದ 22ರ ತನಕ ಆಚರಿಸಲ್ಪಡುವ ಹಿಂದುಗಳ ಹಬ್ಬ ಚೈತ್ರ ನವರಾತ್ರಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಅವಧಿ ಕಡಿಮೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News