ವ್ಯಾಯಾಮದ ಕೊರತೆ ಇರುವವರು ಕೊರೋನದಿಂದ ಸಾಯುವ ಸಾಧ್ಯತೆ ಹೆಚ್ಚು: ಅಧ್ಯಯನ

Update: 2021-04-14 15:14 GMT

ಪ್ಯಾರಿಸ್ (ಫ್ರಾನ್ಸ್), ಎ. 14: ಕೋವಿಡ್-19 ರೋಗಿಗಳ ಪೈಕಿ, ವ್ಯಾಯಾಮದ ಕೊರತೆಯಿರುವವರಲ್ಲಿ ಹೆಚ್ಚು ತೀವ್ರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೂ ಅವರು ಸಾವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಸುಮಾರು 50,000 ಕೊರೋನ ವೈರಸ್ ಸೋಂಕಿತರ ಮೇಲೆ ಅಧ್ಯಯನ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.

ಕೊರೋನ ವೈರಸ್ ಸೋಂಕಿಗೆ ಒಳಗಾಗುವುದಕ್ಕೆ ಮೊದಲು ಕನಿಷ್ಠ ಎರಡು ವರ್ಷಗಳ ಕಾಲ ದೈಹಿಕವಾಗಿ ನಿಷ್ಕ್ರಿಯರಾಗಿದ್ದರೆ, ಜನರು ಆಸ್ಪತ್ರೆಗಳಿಗೆ ದಾಖಲಾಗುವ, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುವ ಹಾಗೂ ಸಾಯುವ ಸಾಧ್ಯತೆಗಳು ಅಧಿಕವಾಗಿರುತ್ತವೆ ಎಂಬುದಾಗಿ ‘ಬ್ರಿಟಿಶ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್’ನಲ್ಲಿ ಮಂಗಳವಾರ ಪ್ರಕಟಗೊಂಡ ಅಧ್ಯಯನ ವರದಿ ಹೇಳಿದೆ.

ಹೆಚ್ಚುತ್ತಿರುವ ವೃದ್ಧಾಪ್ಯ ಮತ್ತು ಅಂಗಾಂಗ ಕಸಿ ಮಾತ್ರ ದೈಹಿಕ ನಿಷ್ಕ್ರಿಯತೆ ಒಡ್ಡುವ ಅಪಾಯವನ್ನೂ ಮೀರಿಸಬಲ್ಲವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News