×
Ad

ದೈನಂದಿನ ನೌಕಾಯಾನ ಸ್ವಾತಂತ್ರ್ಯದ ಭಾಗವಾಗಿದೆ: ಅಮೆರಿಕದಿಂದ ಮತ್ತೊಮ್ಮೆ ಸ್ಪಷ್ಟನೆ

Update: 2021-04-14 20:51 IST

ವಾಶಿಂಗ್ಟನ್, ಎ. 14: ಭಾರತೀಯ ಜಲಪ್ರದೇಶದ ವ್ಯಾಪ್ತಿಗೆ ಒಳಪಡುವ ವಿಶೇಷ ಆರ್ಥಿಕ ವಲಯದಲ್ಲಿ ಅಮೆರಿಕ ನೌಕಾಪಡೆ ಕಳೆದ ವಾರ ನಡೆಸಿರುವ ನೌಕಾಭ್ಯಾಸವು ನಿಯಮಿತವಾಗಿ ನಡೆಯುವ ಸಾಮಾನ್ಯ ಸಂಗತಿಯಾಗಿದೆ ಎಂದು ಅಮೆರಿಕ ಮಂಗಳವಾರ ಇನ್ನೊಮ್ಮೆ ಹೇಳಿದೆ. ಲಕ್ಷದ್ವೀಪ ದ್ವೀಪದ ಸಮೀಪದ ಜಲಪ್ರದೇಶದಲ್ಲಿ ನಡೆಸಿದ ನೌಕಾ ಅಭ್ಯಾಸಕ್ಕೆ ಅಮೆರಿಕವು ಭಾರತದಿಂದ ಅನುಮತಿ ಪಡೆದಿರಲಿಲ್ಲ.

ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದ ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತದೊಂದಿಗೆ ತಾನು ಹೊಂದಿರುವ ಭಾಗೀದಾರಿಕೆಯನ್ನು ಅಮೆರಿಕ ಗೌರವಿಸುತ್ತದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರರೊಬ್ಬರು ಹೇಳಿದರು.

‘‘ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಜಗತ್ತಿನಾದ್ಯಂತವಿರುವ ಸಮುದ್ರಗಳಲ್ಲಿ ಸಂಚರಿಸುವ ಸ್ವಾತಂತ್ರವನ್ನು ಅಮೆರಿಕವು ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿದ್ದು, ಅವೆುರಿಕ ನೌಕಾಪಡೆಯ ಕಾರ್ಯಾಚರಣೆಯು ಅದಕ್ಕೆ ಪೂರಕವಾಗಿಯೇ ಇದೆ’’ ಎಂದು ವಕ್ತಾರರು ನುಡಿದರು.

‘‘ಅದು ಹಿಂದೂ ಮಹಾಸಾಗರದಲ್ಲಿನ ದೈನಂದಿನ ನೌಕಾಯಾನ ಸ್ವಾತಂತ್ರ್ಯದ ಭಾಗವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News