ಈ ನಗರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಪಂಚತಾರಾ ಹೊಟೇಲ್ ಬಳಸಿಕೊಳ್ಳಲಿರುವ ಆಸ್ಪತ್ರೆಗಳು

Update: 2021-04-15 05:07 GMT

 ಮುಂಬೈ: ಸೌಮ್ಯ ಲಕ್ಷಣವಿರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂಬೈನ ಆಸ್ಪತ್ರೆಗಳು ನಗರದಲ್ಲಿರುವ ಪಂಚತಾರಾ ಹೋಟೆಲ್ ಗಳನ್ನು ಬಳಸಿಕೊಳ್ಳಲಿವೆ ಎಂದು ನಗರದ ಆಡಳಿತ ಇಂದು ತಿಳಿಸಿದೆ.

ಖಾಸಗಿ ಆಸ್ಪತ್ರೆಗಳು ನಾಲ್ಕು ಸ್ಟಾರ್ ಅಥವಾ 5 ಸ್ಟಾರ್ ಗಳ ಹೊಟೇಲ್‍ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ ಹಾಗೂ ಹೆಚ್ಚಿನ ಆರೈಕೆಯ ಅಗತ್ಯವಿಲ್ಲದವರನ್ನು ಖಾಸಗಿ ಆಸ್ಪತ್ರೆಗಳಿಂದ ಹೊಟೇಲ್ ಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.’

ನಿಜವಾಗಿಯೂ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ಬೆಡ್ ಗಳಿಗೆ ಸಿಗುವುದನ್ನು  ಖಚಿತಪಡಿಸಲು ಈ ಹೆಜ್ಜೆ ಇಡಲಾಗುತ್ತಿದೆ. ಮುಂಬೈ ಹಾಗೂ ಮಹಾರಾಷ್ಟ್ರದ ಇತರ ನಗರಗಳು ಭಾರೀ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಎದುರಿಸುತ್ತಿರುವ ಕಾರಣ ಈ ಆದೇಶ ನೀಡಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿನ ಅನೇಕ ಬೆಡ್ ಗಳನ್ನು ತುರ್ತು ವೈದ್ಯಕೀಯ ಅಗತ್ಯವಿಲ್ಲದ ರೋಗಿಗಳಿಂದ ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ. ಅಂತಹ ರೋಗಿಗಳನ್ನು ಸ್ಟೆಪ್ ಡೌನ್ ಸೌಲಭ್ಯಗಳಂತಹ ಪ್ರತ್ಯೇಕ ಸೌಲಭ್ಯಗಳಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸಬಹುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News