ಆಂಧ್ರಪ್ರದೇಶ: ಹೆಚ್ಚುತ್ತಿರುವ ಕೋವಿಡ್‌ ಲೆಕ್ಕಿಸದೇ ಯುಗಾದಿ ಆಚರಣೆಯಲ್ಲಿ ಭಾಗಿಯಾದ ಸಾವಿರಾರು ಮಂದಿ

Update: 2021-04-15 09:39 GMT

ಕರ್ನೂಲ್: ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ದಿನವೊಂದಕ್ಕೆ ೨ ಲಕ್ಷ ಕೋವಿಡ್‌ ಸೋಂಕುಗಳು ವರದಿಯಾಗುತ್ತಿವೆ. ಈ ನಡುವೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುಗಾದಿ ಆಚರಣೆಗೆ ಕೋವಿಡ್‌ ನಿಯಮ ಮತ್ತು ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಾವಿರಾರು ಮಂದಿ ಭಾಗವಹಿಸಿದ ಘಟನೆ ನಡೆದಿದೆ. ಈ ಆಚರಣೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿರುವುದಾಗಿ indiatoday.in ವರದಿ ಮಾಡಿದೆ.

ಕರ್ನೂಲ್‌ನ ಕೈರುಪ್ಪ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಯುಗಾದಿ ಆಚರಣೆಯ ಅಂಗವಾಗಿ ಜನರು ಹಸುವಿನ ಸೆಗಣಿಯನ್ನು ಪರಸ್ಪರ ಎಸೆದರು. ಸಂಪ್ರದಾಯದ ಪ್ರಕಾರ, ಭಗವಾನ್‌ ವೀರಸ್ವಾಮಿಯ ರಥೋತ್ಸವ ಮೆರವಣಿಗೆ ನಡೆಯಿತು ಮತ್ತು ಎರಡು ಗುಂಪುಗಳು ಸೆಗಣಿಯನ್ನು ಪರಸ್ಪರ ಎಸೆದು ಯುಗಾದಿ ಆಚರಿಸಿದರು ಎಂದು ವರದಿ ತಿಳಿಸಿದೆ.

ಇನ್ನೊಂದು ಘಟನೆಯಲ್ಲಿ, ಚೌಡೇಶ್ವರಿ ಉತ್ಸವವನ್ನು ಹಲವಾರು ಜನರ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನಡೆಸಿದ್ದು. ಕರ್ನೂಲ್‌ ನ ಕಲ್ಲೂರು ಗ್ರಾಮಸ್ಥರು ಉತ್ಸವದ ಅಂಗವಾಗಿ ಕತ್ತೆಗಳ ಮೆರವಣಿಗೆಯನ್ನು ಆಯೋಜಿಸಿದ್ದರು ಎಂದು ವರದಿ ಉಲ್ಲೇಖಿಸಿದೆ. ಈ ಕುರಿತು ಮಾತನಾಡಿದ ಕರ್ನೂಲ್‌ ಎಸ್ಪಿ ಫಕೀರಪ್ಪ ಕಾಗಿನೆಲ್ಲಿ "ನಾವು ಕಾರ್ಯಕ್ರಮಗಳಿಗೆ ಮುಂಚೆ ಎಲ್ಲ ಸಂಘಟಕರಿಗೂ ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ನೋಟಿಸ್‌ ಹೊರಡಿಸಿದ್ದೇವೆ. ಒಂದು ವೇಳೆ ನಿಯಮ ಉಲ್ಲಂಘನೆಯಾದ ಕುರಿತು ವರದಿಯಾದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News