ಮಹಿಳಾ ಮುಖ್ಯ ನ್ಯಾಯಮೂರ್ತಿ ನೇಮಕವಾಗುವ ಸಮಯ ಬಂದಿದೆ: ಬೋಬ್ಡೆ

Update: 2021-04-15 10:13 GMT

ಹೊಸದಿಲ್ಲಿ: ಭಾರತಕ್ಕೆ ಮಹಿಳಾ ಮುಖ್ಯ ನ್ಯಾಯಮೂರ್ತಿ ನೇಮಕವಾಗುವ ಸಮಯ ಬಂದಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ತಿಳಿಸಿದರು.

ನಮ್ಮ ಮನಸ್ಸಿನಲ್ಲಿ ಮಹಿಳೆಯರ ಬಗ್ಗೆ ಒಲವಿದೆ. ನಾವು ಅದನ್ನು ಉತ್ತಮವಾಗಿ ಕಾರ್ಯಗತಗೊಳಿಸುತ್ತಿದ್ದೇವೆ. ನಮ್ಮ ವರ್ತನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉತ್ತಮ ಅಭ್ಯರ್ಥಿಗಳನ್ನು ಪಡೆಯುವುದು ಅತ್ಯಂತ ಮುಖ್ಯ ಎಂದು ಬೋಬ್ಡೆ ಹೇಳಿದ್ದಾರೆ.

ಹೈಕೋರ್ಟ್‍ಗಳಿಗೆ ತಾತ್ಕಾಲಿಕ ನ್ಯಾಯಾಧೀಶರ ನೇಮಕ ವಿಚಾರ ಕೇಳಿಬಂದಿರುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಮಹಿಳಾ ವಕೀಲರ ಸಂಘವನ್ನು ಪ್ರತಿನಿಧಿಸಿದ ವಕೀಲರಾದ ಸ್ನೇಹಾ ಲಖತಾ ಹಾಗೂ ಶೋಭಾ ಗುಪ್ತಾ ಅವರು ಕೇವಲ 11ಶೇಕಡಾ ಮಹಿಳೆಯರು ಮಾತ್ರ ನ್ಯಾಯಾಂಗದಲ್ಲಿದ್ದಾರೆ ಎಂದು ವಾದಿಸಿದರು. ಹೆಚ್ಚಿನ ಮಹಿಳೆಯರನ್ನು ನ್ಯಾಯಾಧೀಶರನ್ನಾಗಿ ನೇಮಿಸಬೇಕೆಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News