ಸರಕಾರಿ ಆಸ್ಪತ್ರೆಯಲ್ಲಿ ಒಂದೇ ಹಾಸಿಗೆ ಹಂಚಿಕೊಂಡ ಆಕ್ಸಿಜನ್ ಮಾಸ್ಕ್ ಧರಿಸಿದ ಇಬ್ಬರು ರೋಗಿಗಳು

Update: 2021-04-15 15:57 GMT

ಹೊಸದಿಲ್ಲಿ: ದಿಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಮಾಸ್ಕ್ (ಆಕ್ಸಿಜನ್ ಮಾಸ್ಕ್ )ಧರಿಸಿದ ಇಬ್ಬರು ಪುರುಷರು ಒಂದೇ ಹಾಸಿಗೆಯನ್ನು ಹಂಚಿಕೊಂಡಿದ್ದು, ಇವರು ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಬಿಕ್ಕಟ್ಟಿನ ಬಲಿಪಶುವಾಗಿದ್ದಾರೆ. ಇದೇ ರೀತಿ ಹಲವಾರು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಎದುರಾಗಿದ್ದು, ಪರದಾಟ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಈ ವರ್ಷದ ಆರಂಭದಲ್ಲಿ 10,000 ಹೊಸ ದೈನಂದಿನ ಪ್ರಕರಣಗಳನ್ನು ವರದಿಯಾಗಿದ್ದ ದೇಶದಲ್ಲಿ ಗುರುವಾರ ದೈನಂದಿನ ಸೋಂಕುಗಳು 2 ಲಕ್ಷ ದಾಟಿದೆ, ಅಧಿಕೃತ ಮಾಹಿತಿಯ ಪ್ರಕಾರ, ಇದು ವಿಶ್ವದಲ್ಲೇ ದೈನಂದಿನ ಗರಿಷ್ಠ ಕೇಸ್ ಆಗಿದೆ.

1,500 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಕೋವಿಡ್  ಸೌಲಭ್ಯಗಳನ್ನು ಹೊಂದಿರುವ  ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದು ರೋಗಿಗಳನ್ನು ಅಪಘಾತ ವಾರ್ಡ್‌ಗೆ ಕರೆದೊಯ್ಯಲಾಗುತ್ತಿದೆ.

ಕೆಲವರು ಬಸ್‌ಗಳಲ್ಲಿ, ಇನ್ನೂ ಕೆಲವರು ರಿಕ್ಷಾಗಳಲ್ಲಿ ಆಸ್ಪತ್ರೆಗೆ ಆಗಮಿಸಿದ್ದಾರೆ.  

"ನಮಗೆ ಇದು ಖಂಡಿತವಾಗಿಯೂ ಹೆಚ್ಚಿನ ಹೊರೆಯಾಗಿದೆ.ನಾವು ಈಗಾಗಲೇ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News