ಮದ್ದಡ್ಕ ಹೆಲ್ಪ್ ಲೈನ್ ವಾಟ್ಸಪ್ ಗ್ರೂಪ್ ವತಿಯಿಂದ್ ರಂಝಾನ್ ಕಿಟ್ ವಿತರಣೆ

Update: 2021-04-16 11:30 GMT

ಬೆಳ್ತಂಗಡಿ: ಮದ್ದಡ್ಕ ಹೆಲ್ಪ್ ಲೈನ್ ವಾಟ್ಸಪ್ ಗ್ರೂಪ್ ವತಿಯಿಂದ ಮದ್ದಡ್ಕ ಪ್ರದೇಶದ ಆಯ್ದ 100 ಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ನೂರುಲ್ ಹುದಾ ಜುಮಾ ಮಸೀದಿ ಮುಂಬಾಗದಲ್ಲಿ ವಿತರಿಸಲಾಯಿತು.

ನೂರುಲ್ ಹುದಾ ಜುಮ ಮಸೀದಿ ಖತೀಬರಾದ ಮುಹಮ್ಮದ್ ರಫೀಕ್ ಅಹ್ಸನಿ ಉಸ್ತಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮದ್ದಡ್ಕ ಹೆಲ್ಪ್ ಲೈನ್ ಅದ್ಯಕ್ಷ ರಾದ ಉಬೈದ್ ಯು.ಆರ್ ಅದ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ನೂರುಲ್ ಹುದಾ ಜುಮಾ ಮಸೀದಿ ಅದ್ಯಕ್ಷ ಬದ್ರುದ್ದೀನ್ ಮಾಸ್ಟರ್, ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಝ್ ಮದ್ದಡ್ಕ, ಮಸೀದಿ ಕಾರ್ಯದರ್ಶಿ ಸಿರಾಜು ಚಿಲಿಂಬಿ, ಹೆಲ್ಪ್ ಲೈನ್ ಕಾರ್ಯದರ್ಶಿ ಅಸ್ಲಮ್ ಮದ್ದಡ್ಕ, ಕೋಶಾಧಿಕಾರಿ ರಿಯಾಝ್ ಸಬರಬೈಲ್, ಮಸೀದಿ ಉಸ್ತಾದರುಗಳಾದ ಇಬ್ರಾಹಿಮ್ ಮುಸ್ಲಿಯಾರ್, ಮುಹಮ್ಮದ್ ರಫೀಕ್ ಸಖಾಫಿ ಹಾಗು ಹೆಲ್ಪ್ ಲೈನ್ ಕಾರ್ಯಕಾರಿ ಸಮಿತಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News