ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಸರಕಾರ ಅನುಮೋದನೆ

Update: 2021-04-16 12:46 GMT

ಲಂಡನ್: ಕೋಟ್ಯಂತರ ರೂ. ಹಗರಣದ ಆರೋಪಿ, ಕೋಟ್ಯಧೀಶ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ ಸರಕಾರ ಅನುಮೋದನೆ ನೀಡಿದೆ. ಗಡಿಪಾರಿನ ಆದೇಶಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ.

ನೀರವ್ ಮೋದಿಗೆ ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವುದನ್ನು ಕಾನೂನುಬದ್ಧವಾಗಿ ಪ್ರಶ್ನಿಸುವ ಆಯ್ಕೆ ಇನ್ನೂ ಇದೆ.

ಈ ಹಿಂದೆ ಬ್ರಿಟನ್ ವೆಸ್ಟ್ಮಿನಿಸ್ಟರ್ ನ್ಯಾಯಾಲಯವು ಗಡಿಪಾರಿನ ಮನವಿಯನ್ನು ಸಮ್ಮತಿಸಿ ಪ್ರಕರಣವನ್ನು ಗೃಹ ಕಾರ್ಯದರ್ಶಿಗೆ ಹಸ್ತಾಂತರಿಸಿತ್ತು.

ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಎನ್ ಬಿ)ಸಾಲ ಹಗರಣದಲ್ಲಿ 14,000 ಕೋ.ರೂ.ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತದ ನ್ಯಾಯಾಲಯಕ್ಕೆ  ನೀರವ್ ಮೋದಿ ಬೇಕಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News