ಭಾರತ ಮೂಲದ ಗಣಿತಜ್ಞನ ದೇಹ ಹಡ್ಸನ್ ನದಿಯಲ್ಲಿ ಪತ್ತೆ

Update: 2021-04-16 14:53 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಎ. 16: ಭಾರತ ಮೂಲದ 31 ವರ್ಷದ ಗಣಿತಜ್ಞರೊಬ್ಬರ ಮೃತದೇಹ ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಶುವ್ರೊ ಬಿಸ್ವಾಸ್‌ರ ಮೃತದೇಹ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಕ್ರಿಪ್ಟೊಕರೆನ್ಸಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವಂತೆ ಕಂಡು ಬರುತ್ತಿದ್ದರು ಎಂದು ಪತ್ರಿಕೆ ಹೇಳಿದೆ.

ನನ್ನ ಸಹೋದರ ಕ್ರಿಪ್ಟೊಕರೆನ್ಸಿ ಭದ್ರತಾ ಕಾರ್ಯಕ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಸಹೋದರ ಬಿಪ್ರೊಜಿತ್ ಬಿಸ್ವಾಸ್ ಹೇಳಿದ್ದಾರೆ.

ನನ್ನ ಸಹೋದರನ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕುಟುಂಬ ಸದಸ್ಯರ ಗಮನಕ್ಕೆ ಕಳೆದ ವರ್ಷ ಬಂದಿತ್ತು ಎಂದು ಹೇಳಿದ ಅವರು, ಆದರೆ, ಅವರು ಅದನ್ನು ಹೆಚ್ಚಾಗಿ ಹೊರಗೆ ತೋರ್ಪಡಿಸುತ್ತಿರಲಿಲ್ಲ ಎಂದರು.

ಅವರು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಹಚ್ಚುತ್ತಿದ್ದರು, ಚೂರಿ ಝಳಪಿಸುತ್ತಿದ್ದರು ಹಾಗೂ ಲಿಫ್ಟ್‌ನ ಒಳಗೆ ರಕ್ತ ಬಳಿಯುತ್ತಿದ್ದರು ಎಂಬುದಾಗಿ ಅಪಾರ್ಟ್‌ಮೆಂಟ್‌ನ ಆಡಳಿತ ಮಂಡಳಿಯು ಹಿಂದೆ ಪೊಲೀಸರಿಗೆ ಮಾಹಿತಿ ನೀಡಿತ್ತು.

ಅವರ ಸಾವಿಗೆ ಕಾರಣವನ್ನು ನಗರದ ವೈದ್ಯಕೀಯ ತಪಾಸಕರ ಕಚೇರಿ ಪತ್ತೆಹಚ್ಚುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News