ಮಣಿಪಾಲದಲ್ಲಿ ಇಂದು 'ಅಲ್-ಬೈಕ್' 71ನೇ ಶಾಖೆ ಶುಭಾರಂಭ

Update: 2021-04-17 06:25 GMT

ಮಣಿಪಾಲ, ಎ.17: 'ದ ಟೇಸ್ಟ್ ಆಪ್ ಮಿಡಲ್ ಈಸ್ಟ್' ಹೆಸರಿನ ಫ್ರೈಡ್ ಚಿಕನ್ ಮಳಿಗೆ 'ಅಲ್-ಬೈಕ್'ನ ಭಾರತದ 71ನೇ ಶಾಖೆ ಇಂದು ಸಂಜೆ ಮಣಿಪಾಲದ ಎಂಡ್ ಪಾಯಿಂಟ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಸಮೀಪದಲ್ಲಿ  ಶುಭಾರಂಭಗೊಳ್ಳಲಿದೆ.

ಸಂಜೆ 7.30ಕ್ಕೆ ಶಾಸಕ ರಘುಪತಿ ಭಟ್ ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟನೆ ಮಾಡಲಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಸಗ್ರಿ ವಾರ್ಡ್ ಕೌನ್ಸಿಲರ್ ಭಾರತಿ ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಉದ್ಯಮಿ ರಫೀಕ್ ಇದಿನಬ್ಬ ಸಾಗರ್, ಅಲ್-ಬೈಕ್ ಫುಡ್ ಸಿಸ್ಟಮ್ ಸ್ಥಾಪಕ ಸೈಯದ್ ಸಾಹಿಲ್, ಉಡುಪಿ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಕ್ರಮ್ ಮೌಲಾ, ಎಕ್ಸ್ ಪರ್ಟೈಸ್ ಕನ್ಸ್ಟ್ರಕ್ಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೈಕ್ ಕರ್ನಿರೆ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅಲ್-ಬೈಕ್ ಮ್ಯಾನೇಜ್ಮೆಂಟ್ ಟೀಮ್ ಪಾಲುದಾರ ಸಲೀಂ ಸಾಗರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News