ಮಣಿಪಾಲ: ಬೃಹತ್ ವಿಶ್ವಕಲೆಯ ರಂಗೋಲಿ ರಚನೆ

Update: 2021-04-17 13:52 GMT

ಮಣಿಪಾಲ, ಎ.17: ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹಿರಿಯರ ವಿಭಾಗದ ಚಿತ್ರಕಲಾ ವಿದ್ಯಾರ್ಥಿಯರು ವಿಶ್ವ ಕಲಾ ದಿನಾಚರಣೆ ಪ್ರಯುಕ್ತ 12ಅಡಿ ಚೌಕ ವಿಸ್ತೀರ್ಣದ ವಿಶ್ವಕಲೆಯ ರಂಗೋಲಿ ರಚಿಸಿದರು.

ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್ ಡಾ.ಜಸ್ಪ್ರೀತ್ ಸಿಂಗ್ ದಿಲ್ ಮಾತನಾಡಿ, ಕಲಾ ಉತ್ಸುಕತೆಯಲ್ಲಿದ್ದಾಗ ಸಾಧನೆಯ ಪಥ ಸಾಗುತ್ತದೆ ಮತ್ತು ಆತ್ಮ ವಿಶ್ವಾಸ ಬದುಕಿಗೆ ಬೆಳಕಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಗಲಿದ ಉಡುಪಿಯ ಹಿರಿಯ ಕಲಾವಿದ, ಕಲಾಗುರು ದಿ.ಕೆ.ಎಲ್.ಭಟ್ ರವರಿಗೆ ಪುಷ್ಪಾರ್ಚನೆಯ ಮೂಲಕ ಗುರು ನಮನವನ್ನು ಸಲ್ಲಿಸಲಾಯಿತು. ಉಡುಪಿಯ ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಮತ್ತು ಮಣಿಪಾಲ ಶೆಫಿನ್ಸ್ ಮುಖ್ಯಸ್ಥ ಮನೋಜ್ ಕಡಬ ಗುರುನಮನ ಸಲ್ಲಿಸಿದರು.

ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ವಿದ್ಯಾರ್ಥಿ ಕಲಾವಿದೆ ಸುಲೋಚನಾ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News