ಕುಂದಾಪುರದಲ್ಲಿ ಮಲ್ಲಿಗೆ ಕಟ್ಟೆ ಉದ್ಘಾಟನೆ

Update: 2021-04-17 13:58 GMT

ಕುಂದಾಪುರ, ಎ.17: ಕುಂದಾಪುರ ವಲಯದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಮಲ್ಲಿಗೆ ಬೆಳೆಗಾರರ ಒಕ್ಕೂಟ ಕ ಟ್ಟೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಹುಣ್ಸೆಮಕ್ಕಿ ಕಟ್ಕೆರೆಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಮಲ್ಲಿಗೆ ಕೃಷಿಕ ಸಿದ್ಧಯ್ಯ ಶೆಟ್ಟಿ ಮಲ್ಲಿಗೆ ಹೂವು ಸಂಗ್ರಾಹಕರಾಗಿ ನೇಮಕವಾದ ಗಣೇಶ್‌ಪೂಜಾರಿ ಅವರಿಗೆ ಮಲ್ಲಿಗೆ ಕಟ್ಟನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.

ಸಂಯೋಜಕ ರಮೇಶ್ ಪೂಜಾರಿ ಹುಣ್ಸೆಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಸುಪಾಸಿನ ಮಲ್ಲಿಗೆ ಬೆಳೆಗಾರರು ರೈತರಿಂದ ರೈತರಿಗಾಗಿ ತತ್ವದ ಮೇಲೆ ತಾವು ಬೆಳೆದ ಮಲ್ಲಿಗೆಯನ್ನು ನೇರವಾಗಿ ಈ ಸಂಗ್ರಹಕಾರರಿಗೆ ದಿನಂಪ್ರತಿ ನಿಗದಿತ ಸಮಯದೊಳಗೆ ತಲುಪಿಸಿದರೆ ಶೋಷಣೆ, ನಷ್ಟ ತಪ್ಪಿಸಿ ಅಧಿಕ ಲಾಭ ಪಡೆಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣೇಶ್ ಶೆಟ್ಟಿ ಮೊಳಹಳ್ಳಿ, ಚಂದ್ರ ಜಪ್ತಿ, ಕಲಾವತಿ ಗಾಣಿಗ ಕಟ್ಕೆರೆ, ಲಲಿತಾ ಶೆಟ್ಟಿ, ಮಾಲತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News