ಮಂಗಳೂರು ಮನಪಾ ವ್ಯಾಪ್ತಿಯೊಳಗೆ ಧಾರ್ಮಿಕ ಆಚರಣೆಗಳ ಅನುಮತಿ ರದ್ದು

Update: 2021-04-17 14:57 GMT

ಮಂಗಳೂರು, ಎ.17: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಈಗಾಗಲೇ ಮನಪಾ ವ್ಯಾಪ್ತಿಯಲ್ಲಿ ನೀಡಿರುವ ಧಾರ್ಮಿಕ ಆಚರಣೆಗಳ ಕಾರ್ಯಕ್ರಮಗಳ ಅನುಮತಿಯನ್ನು ತಕ್ಷಣದಿಂದ ರದ್ದು ಮಾಡಿದ್ದಾರೆ.

ಸರಕಾರದ ಆದೇಶದಂತೆ ವಿಪತ್ತು ನಿರ್ವಹಣೆಯ ಕಾಯ್ದೆಯ ಪ್ರಕಾರ ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ವಿಚಾರದಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಿದೆ. ಅಲ್ಲದೆ ಆನ್‌ಲೈನ್ ಫುಡ್ ಡೆಲಿವರಿ ಸಂಪರ್ಕಿಸುವ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಸೂಪರ್ ಮಾರ್ಕೆಟ್, ಮಾಲ್, ಮದುವೆ ಹಾಲ್ ಸಿಬ್ಬಂದಿ ಮತ್ತು ಬಸ್ ಚಾಲಕರು, ನಿರ್ವಾಹಕರು, ರಿಕ್ಷಾ ಚಾಲಕರು, ಇತರ ಜನಸಂದಣಿ ಪ್ರದೇಶದಲ್ಲಿ ಸೇರುವವರು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಯನ್ನು ನಡೆಸಬೇಕು.

ಈ ನಿಯಮಗಳನ್ನು ಉಲ್ಲಂಸಿದರೆ ಸರಕಾರದ ಆದೇಶದಂತೆ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ದಂಡ ವಿಧಿಸಲಾಗುವುದು ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News