ಮಣಿಪಾಲದಲ್ಲಿ ‘ಅಲ್-ಬೈಕ್’ ದ ಟೇಸ್ಟ್ ಆಫ್ ಮಿಡಲ್ ಈಸ್ಟ್ ಇದರ 71ನೆ ಶಾಖೆ ಶುಭಾರಂಭ

Update: 2021-04-17 15:36 GMT

ಉಡುಪಿ, ಎ.17: ‘ಅಲ್-ಬೈಕ್’-ದ ಟೇಸ್ಟ್ ಆಫ್ ಮಿಡಲ್ ಈಸ್ಟ್ ಇದರ 71ನೆ ಶಾಖೆಯು ಶನಿವಾರ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಶಾಖೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ಮಣಿಪಾಲ ಇಂದು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಇದೀಗ ಇಲ್ಲಿಗೆ ಆಗಮಿಸಿರುವ ಅಲ್‌ಬೈಕ್ ಸಂಸ್ಥೆ ಮಣಿಪಾಲದ ಅಭಿವೃದ್ದಿಗೆ ತನ್ನದೇ ಆದ ತನ್ನ ಕೊಡುಗೆ ನೀಡಲಿದೆ. ಮುಂದೆ ಈ ಸಂಸ್ಥೆ ಇನ್ನಷ್ಟು ಶಾಖೆಗಳನ್ನು ಆರಂಭಿಸಲಿ ಎಂದು ಹಾರೈಸಿದರು.

ಅಲ್ ಬೈಕ್ ಫುಡ್ ಸಿಸ್ಟಮ್ ಕಂಪೆನಿಯ ಸ್ಥಾಪಕ ಸೈಯ್ಯದ್ ಸಾಹಿಲ್ ಮಾತನಾಡಿ, ನಮ್ಮ ಸಂಸ್ಥೆ ಕರ್ನಾಟಕದಲ್ಲಿ 22 ಸೇರಿದಂತೆ ದೇಶದಲ್ಲಿ ಒಟ್ಟು 71 ಶಾಖೆಗಳನ್ನು ಹೊಂದಿದ್ದು ಶೀಘ್ರವೇ ಮಂಗಳೂರು, ಸುರತ್ಕಲ್, ಭಟ್ಕಳ್, ಶಿವಮೊಗ್ಗ, ಸುಳ್ಯದಲ್ಲೂ ಶಾಖೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಸರ್ಗಿ ವಾರ್ಡ್‌ನ ಸದಸ್ಯೆ ಭಾರತಿ ಪ್ರಶಾಂತ್, ಸಾಗರದ ಉದ್ಯಮಿ ರಫೀಕ್ ಇದ್ದಿನಬ್ಬ ಸಾಗರ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಾಂಚೈಸಿ ಮಾಲಕ ಸಲೀಂ ಸಾಗರ್ ಉಪಸ್ಥಿತರಿದ್ದರು. ನಿತಾಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News